Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ಯಾಲೆಸ್ತೀನ್‌ಗೆ ₹ 2.5 ಕೋಟಿ ನೆರವು ಘೋಷಿಸಿದ ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ಝೈ

ಗಾಝಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವಿನ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜೈ, ಗಾಝಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಮತ್ತು ಸಂತ್ರಸ್ತ ಪ್ಯಾಲೆಸ್ತೀನ್‌ಗೆ 2.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ವಿಡಿಯೊ ಮೂಲಕ ಹೇಳಿಕೆ ನೀಡಿರುವ ಮಲಾಲಾ ಯೂಸುಫ್‌, ಕದನಕ್ಕೆ ವಿರಾಮ ಹಾಕಿ ಗಾಜಾದಲ್ಲಿರುವವರಿಗೆ ಮಾನವೀಯ ನೆರವು ನೀಡಲು ಇಸ್ರೇಲ್‌ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇಸ್ರೇಲ್, ಪ್ಯಾಲೆಸ್ತೀನ್‌ ಮತ್ತು ಪ್ರಪಂಚದಾದ್ಯಂತ ಶಾಂತಿಗಾಗಿ ಮೊರೆಯಿಡುವವರ ಜೊತೆ ನಾನು ನನ್ನ ಧ್ವನಿಯನ್ನು ಸೇರಿಸುತ್ತಿದ್ದೇನೆ. ಸಾಮೂಹಿಕ ಶಿಕ್ಷೆ ಉತ್ತರವಲ್ಲ. ಗಾಝಾದ ಜನಸಂಖ್ಯೆಯ ಅರ್ಧದಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಮಲಾಲಾ ಹೇಳಿದ್ದಾರೆ.

“>

ಗಾಝಾಕ್ಕೆ ಮಾನವೀಯ ನೆರವು ನೀಡಲು ಇಸ್ರೇಲ್‌ ಸರ್ಕಾರವನ್ನು ಒತ್ತಾಯಿಸುತ್ತೇನೆ. ಈ ಬಿಕ್ಕಟ್ಟಿನಲ್ಲಿ ಪ್ಯಾಲೆಸ್ತೀನ್‌ ಜನರಿಗೆ ಸಹಾಯ ಮಾಡಲು 2.5 ಕೋಟಿ ದೇಣಿಗೆ ನೀಡುವುದಾಗಿ ಮಲಾಲಾ ಘೋಷಿಸಿದ್ದು, ದಾನಿಗಳು ಸಹಾಯ ಮಾಡುವಂತೆ ಕೂಡ ಮನವಿ ಮಾಡಿದ್ದಾರೆ.

ಇದರ ಜೊತೆಗೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಮಧ್ಯದ ಯುದ್ಧ ತಕ್ಷಣ ನಿಲ್ಲಿಸಬೇಕು. ಕದನ ವಿರಾಮ ಮತ್ತು ಶಾಶ್ವತ ಶಾಂತಿಗಾಗಿ ಕೆಲಸ ಮಾಡಬೇಕು ಎಂದು ಅವರು ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!