ದೇಶದಲ್ಲೇ ಮೊದಲು ವಿದ್ಯುತ್ ಬಂದಿದ್ದು ಕೋಲಾರಕ್ಕೆ. ಬಂಗಾರದ ಗಣಿ ಇದ್ದಿದ್ದು ಕೋಲಾರದಲ್ಲಿ. ನೆಹರು ಅವರ ಕಾಲದಲ್ಲಿ ಕೆ.ಸಿ ರೆಡ್ಡಿಯವರ ಕಾಲದಲ್ಲಿ ರಾಜ್ಯದಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾದವು. ನಿಮ್ಮ ಕಾಲದಲ್ಲಿ ರಾಜ್ಯಕ್ಕೆ ಯಾವ ಕಾರ್ಖಾನೆ ಬಂದಿದೆ ಹೇಳಿ ಮೋದಿಯವರೇ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
LIVE: ಜೈ ಭಾರತ್ ರ್ಯಾಲಿ, ಕೋಲಾರದಿಂದ ನೇರ ಪ್ರಸಾರ https://t.co/owPQp3BwZI
— Karnataka Congress (@INCKarnataka) April 16, 2023
“>
ಕೋಲಾರ ಜಿಲ್ಲೆಯಲ್ಲಿ ಭಾನುವಾರ ನಡೆದ ‘;ಜೈ ಭಾರತ್ ಸಮಾವೇಶ” ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಮೋದಿ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ 40% ಕಮಿಷನ್ ಹೊಡೆಯುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರ ಸ್ಥಾಪಿಸಲು ತಾವಾಗಿಯೇ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಏನಾಯ್ತು? ಇರುವ ಉದ್ಯೋಗಗಳೂ ನಷ್ಟವಾಗಿವೆ. ಕೈಗಾರಿಕೆಗಳು ಮುಚ್ಚಿವೆ. ಯುವಕರು ಉದ್ಯೋಗಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆ. ಮೋದಿಯವರು ಮಾತ್ರ 70 ವರ್ಷದಲ್ಲಿ ಆಗದೇ ಇರುವುದನ್ನು ನಾನು ಮಾಡಿದ್ದೇನೆ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಗೆಲುವು ಪ್ರಜಾಪ್ರಭುತ್ವದ ಗೆಲುವು
ಕಾಂಗ್ರೆಸ್ ಪಕ್ಷದ ಗೆಲುವು ಕೇವಲ ರಾಜಕೀಯ ಪಕ್ಷದ ಗೆಲುವು ಎನಿಸಿಕೊಳ್ಳುವುದಿಲ್ಲ ಅಥವಾ ಅಧಿಕಾರ ಹಿಡಿಯುವ ಮಾನದಂಡದ ಗೆಲುವು ಮಾತ್ರವಲ್ಲ. ಕಾಂಗ್ರೆಸ್ ಗೆಲುವು ಪ್ರಜಾಪ್ರಭುತ್ವದ ಗೆಲುವು, ಸಂವಿಧಾನದ ಗೆಲುವು, ಐಕ್ಯತೆ, ಏಕತೆಯ ಗೆಲುವು, ಬಸವ ತತ್ವದ ಗೆಲುವು, ಪ್ರಗತಿಯ ಗೆಲುವು, ಸತ್ಯದ ಗೆಲುವು, ಭ್ರಷ್ಟಾಚಾರದ ವಿರುದ್ದದ ಗೆಲುವು ಎಂದು ಕಾಂಗ್ರೆಸ್ ಬಣ್ಣಿಸಿದೆ.
ಸರ್ವಾಧಿಕಾರ ಸೋಲಬೇಕು, ಭಾರತ ಗೆಲ್ಲಬೇಕು. ವಿಭಜನಾ ರಾಜಕೀಯ ಸೋಲಬೇಕು, ಏಕತೆಯ ಭಾರತ ಗೆಲ್ಲಬೇಕು, ಕುತಂತ್ರಗಳು ಸಾಯಬೇಕು, ಸತ್ಯ ಗೆಲ್ಲಬೇಕು. ಸತ್ಯದೆಡೆಗಿನ ಹೋರಾಟದಲ್ಲಿ ನಿರತರಾಗಿರುವ ರಾಹುಲ್ ಗಾಂಧಿಯವರು ಕುರುನಾಡಿನ “ಜೈ ಭಾರತ” ಸಮಾವೇಶಕ್ಕೆ ಕರುನಾಡ ನೆಲಕ್ಕೆ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.




