ನನ್ನ ತಂದೆ ಎಸ್.ಡಿ ಜಯರಾಮ್ ಅವರಂತೆ ಮಂಡ್ಯ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಮಾಡಲು ನನಗೊಂದು ಅವಕಾಶ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಮನವಿ ಮಾಡಿದರು.
ಮಂಡ್ಯ ನಗರದ 26ಮತ್ತು 27ನೇ ವಾರ್ಡ್ ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ನಡೆಸಿದರು.
ನನ್ನ ತಂದೆ ಎಸ್.ಡಿ.ಜಯರಾಮ್ ಅವರು ಕಳೆದ 25ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯನ್ನು ಅಭಿವೃದ್ದಿಗೊಳಿಸಲು ಸ್ಥಳೀಯ ಮುಖಂಡರ ಸಹಕಾರದಲ್ಲಿ ಪಣತೊಟ್ಟು ಸಮಗ್ರ ಅಭಿವೃದ್ದಿಯ ಆಧುನಿಕ ಮಂಡ್ಯ ನಿರ್ಮಾಣಕ್ಕೆ ಮುಂದಾದರು. ಅಂದು ಜನ ಕಂಡಂತಹ ಅಭಿವೃದ್ದಿ ಕೆಲಸಗಳು ಮತ್ತೆ ಕಾಣದಾದವು. ನಾನು ಜೆಡಿಎಸ್ ನಲ್ಲಿದ್ದು 2 ಬಾರಿ ಟಿಕೆಟ್ ಕೇಳಿದರೂ ನಿರಾಕರಿಸಿದರು.ಆದರೆ ಬಿಜೆಪಿ ಪಕ್ಷ ನನ್ನನ್ನು ಗುರುತಿಸಿ ಅಭ್ಯರ್ಥಿ ಮಾಡಿದ್ದು, ಮತದಾರರು ಆಶೀರ್ವಾದ ಮಾಡಬೇಕೆಂದು ಕೋರಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನಪರ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ, ನಮ್ಮನ್ನು ಗುರುತಿಸಿದ ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿ, ವರಿಷ್ಠರ ತಿರ್ಮಾನದಂತೆ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದಾರೆ. ಚುನಾವಣೆಯಲ್ಲಿ ಜನಾಶೀರ್ವಾದಿಂದ ಗೆಲುವು ಸಾಧ್ಯವಾಗುತ್ತದೆ ಎಂದರು.
ಏ.20ರಂದು ನಾಮಪತ್ರ
ಏ.20 ರಂದು ನಾಮಪತ್ರ ಸಲ್ಲಿಸಲು ನಿರ್ಧಾರವಾಗಿದ್ದು,ಅಂದು ನಗರದ ಶ್ರೀಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ.ಅಂದು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆ ಗೊಂಡರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ. ಸದಾನಂದ, ಪದಾಧಿಕಾರಿಗಳಾದ ಶಶಿಕುಮಾರ್, ಶಂಕರ್, ಧರಣಿ, ಮಂಜುನಾಥ್, ನಗರಸಭಾ ನಾಮಿನಿ ಸದಸ್ಯರಾದ ಚಂದ್ರ, ಪ್ರಸನ್ನ, ಮೂಡ ಸದಸ್ಯ ಹನುಮಂತು ಮತ್ತಿತರರಿದ್ದರು.




