Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಮತಾ ಪ್ರಿಯದರ್ಶಿನಿಗೆ ಎಂ.ಟೆಕ್ ನಲ್ಲಿ ರ್‍ಯಾಂಕ್

ಮಂಡ್ಯ ನಗರದ ಕುವೆಂಪುನಗರದ ಮಮತ ಪ್ರಿಯದರ್ಶಿನಿ.ಕೆ.ಎಸ್. ಅವರು ಎಂ.ಟೆಕ್ ನಲ್ಲಿ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ನಲ್ಲಿ ರಾಜ್ಯಕ್ಕೆ 7 ನೇ ರ್‍ಯಾಂಕ್ ಗಳಿಸುವ ಮೂಲಕ ಸ್ವರ್ಣಪದಕ ಪಡೆದುಕೊಂಡಿದ್ದಾರೆ.

ಇವರು ಬೆಂಗಳೂರು ಕೆಂಗೇರಿಯ ಎಸ್.ಜೆ.ಬಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ತಮ್ಮ ಎಂ‌.ಟೆಕ್ ವಿದ್ಯಾಭ್ಯಾಸ ಮಾಡಿದ್ದಾರೆ. ಮಾಚ್೯ 7 ರಂದು ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಸ್ವರ್ಣ ಪದಕ ಪಡೆದುಕೊಳ್ಳಲಿದ್ದಾರೆ.

ಮಮತಾ ಪ್ರಿಯಾದರ್ಶಿನಿ ಮಂಡ್ಯದ ಹಿರಿಯ ಪತ್ರಕರ್ತ ಕೆರಗೋಡು ಸೋಮಶೇಖರ್ ಹಾಗೂ ಶೋಭಾ ದಂಪತಿಗಳ ಪುತ್ರಿಯಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!