Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮನ್ ಮುಲ್ ಆಡಳಿತ ಮಂಡಳಿ ನಿರಾಪೇಕ್ಷಣ ಪತ್ರ ಪಡೆದಿಲ್ಲ – ಗುರುರಾಜ್

ಮನ್ ಮುಲ್ ಆಡಳಿತ ಮಂಡಳಿ ನಿರ್ಮಾಣ ಮಾಡಿರುವ ಮೆಗಾ ಡೇರಿ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಾಪೇಕ್ಷಣ ಪತ್ರ(NOC) ಪಡೆದಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ. ಗುರುರಾಜ್ ಆರೋಪಿಸಿದರು.

ಮಂಡ್ಯ ತಾಲೂಕಿನ ಗೆಜ್ಜಲಗೆರೆಯಲ್ಲಿ ಮನ್ಮುಲ್ ಮೆಗಾ ಡೇರಿಗೆ ಬಿದ್ದ ಬೆಂಕಿಯನ್ನು ನಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮನ್ ಮುಲ್ ಅಧಿಕಾರಿಗಳು 2016ರ ನಿಯಮದಂತೆ ಕಟ್ಟಡ ನಿರ್ಮಾಣಕ್ಕೆ ಮುನ್ನ ಅಗ್ನಿಶಾಮಕ ಇಲಾಖೆಯಿಂದ ನಿರಾಪೇಕ್ಷಣ ಪತ್ರ ಪಡೆಯಬೇಕು. ಆದರೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೆಗಾ ಡೇರಿಗೆ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ನಿರಾಪೇಕ್ಷಣ ಪತ್ರ ಪಡೆದಿಲ್ಲ. ಇದರಿಂದಾಗಿ ಮೆಗಾ ಡೇರಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿದ್ದಾರೆ.ಆದರೆ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಗ್ನಿಶಾಮಕ ದಳದ ಅಧಿಕಾರಿ ಗುರುರಾಜ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ 15 ಮೀಟರ್ ಎತ್ತರದ ಕಟ್ಟಡಕ್ಕೆ ಯಾವುದೇ ನಿರಾಪೇಕ್ಷಣ ಪತ್ರದ ಅಗತ್ಯವಿಲ್ಲ. ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕಿತ್ತು ಎಂದು ನುಣುಚಿ ಕೊಳ್ಳಲು ಹೊರಟಿರುವುದು ಅನುಮಾನ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!