Thursday, September 19, 2024

ಪ್ರಾಯೋಗಿಕ ಆವೃತ್ತಿ

`ಮನುಷ್ಯನಿಗೆ ಕಷ್ಟಗಳು ಬೇಕು, ಏಕೆಂದರೆ ಯಶಸ್ಸನ್ನು ಆನಂದಿಸಲು ಅವು ಅವಶ್ಯಕ’


  • ಇಂದು ಭಾರತದ ಕ್ಷಿಪಣಿ ಮನುಷ್ಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮದಿನ 

  • ಜನರ ರಾಷ್ಟ್ರಪತಿಯಾಗಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಅವರ ಸೇವೆ ಅನನ್ಯ

`ಮನುಷ್ಯನಿಗೆ ಕಷ್ಟಗಳು ಬೇಕು, ಏಕೆಂದರೆ ಯಶಸ್ಸನ್ನು ಆನಂದಿಸಲು ಅವು ಅವಶ್ಯಕ’ ಇವು ಭಾರತದ ಕ್ಷಿಪಣಿ ಮನುಷ್ಯ ಹಾಗೂ ಜನರ ರಾಷ್ಷ್ರಪತಿ ಎಂದೇ ಬಿಂಬಿತವಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಪೂರ್ತಿದಾಯಕ ನುಡಿಗಳು.

ಇಂದು ಕಲಾಂ ಅವರ 91 ನೇ ಜನ್ಮ ಜನ್ಮದಿನ. ಭಾರತದ ಮಿಸೈಲ್ ಮ್ಯಾನ್ ಅವರ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿ ತಿಳಿಯೋಣ.

‘ಭಾರತದ ಕ್ಷಿಪಣಿ ಮನುಷ್ಯ’ ಎಂದು ಕರೆಯಲ್ಪಡುವ ಡಾ. ಎಪಿಜೆ ಅಬ್ದುಲ್ ಕಲಾಂ ಅವರು 15 ಅಕ್ಟೋಬರ್ 1931 ರಂದು ಜನಿಸಿದರು. ಅವರ ಪೂರ್ಣ ಹೆಸರು ಡಾ.ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ.

ಭಾರತದ 11 ನೇ ರಾಷ್ಟ್ರಪತಿ, ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಕ್ಷಿಪಣಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಮತ್ತು ಅವರ ಸಾಧನೆಗಳು ಮತ್ತು ಕೊಡುಗೆಗಳಿಗೆ ಯಾವುದೇ ಸಾಟಿ ಇಲ್ಲ, ಅವರು ವಿಜ್ಞಾನ-ತಂತ್ರಜ್ಞಾನದಲ್ಲಿ ಮಾತ್ರವಲ್ಲದೇ ತತ್ವಶಾಸ್ತ್ರ, ಸಾಹಿತ್ಯ ಮತ್ತು ಭಾಷೆಯಂತಹ ಇತರ ಹವಲು ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟಿದ್ದಾರೆ.

ಕಲಾಂ ಅವರು ವಿಂಗ್ಸ್ ಆಫ್ ಫೈರ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ: ಆನ್ ಆಟೋಬಯೋಗ್ರಫಿ, ಇಂಡಿಯಾ 2020: ಎ ವಿಷನ್ ಫಾರ್ ದಿ ನ್ಯೂ ಮಿಲೇನಿಯಮ್ ಪ್ರಮುಖವಾದವು. ಅವರ ಜೀವಿತಾವಧಿಯಲ್ಲಿ 22 ಕವನಗಳು ಮತ್ತು ನಾಲ್ಕು ಹಾಡುಗಳನ್ನು ರಚಿಸಿದ್ಧಾರೆ.

“ಸಣ್ಣ ಕನಸುಗಳನ್ನು ಕಾಣುವುದು ಅಪರಾಧವಾಗಿದೆ; ದೊಡ್ಡ ಕನಸುಗಳನ್ನು ಕಾಣಿರಿ “  ಎಂಬುದು  ಅವರ ಸ್ಪೂರ್ತಿದಾಯಕ ನುಡಿಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!