ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಮತಾ ಶಿವಪೂಜಿ ತೀರ್ಪು ನೀಡಿದ್ದಾರೆ.
ತಾಲ್ಲೂಕಿನ ಶಿಂಷಾಪುರ ಗ್ರಾಮದ ನಿವಾಸಿ ಚಿಕ್ಕತಾಯಮ್ಮ ಅವರೇ ಶಿಕ್ಷೆಗೊಳಗಾದ ಅಪರಾದಿ. ಇವರಿಗೆ 15,500 ದಂಡ ವಿಧಿಸಿ ದಂಡ ಕಟ್ಟುವುದು, ತಪ್ಪಿದಲ್ಲಿ ಕಾರಾಗೃಹ ವಾಸ ವಿಧಿಸಿ ತೀರ್ಪು ನೀಡಿದ್ದಾರೆ.
2016ರ ಜೂ.26ರಂದು ಆರೋಪಿತೆ ಶಿಂಷಾಪುರದ ಕಾಳಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ ದೂರು ದಾಖಲಾಗಿತ್ತು.

ಈ ಸಂಬಂಧ ತನಿಖಾಧಿಕಾರಿಯಾದ ಬೆಳಕವಾಡಿ ಪೊಲೀಸ್ ಠಾಣೆಯ ಅಂದಿನ ಪಿಎಐ ಲೋಹಿತ್ ಕುಮಾರ್ ತನಿಖೆ ಪೂರ್ಣಗೊಳಿಸಿ ನ್ಯಾಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಚ್.ಎಸ್.ಪೂರ್ಣಿಮಾ ಅವರು ವಾದ ಮಂಡಿಸಿದ್ದರು.
ಅಲ್ಲದೆ, ನೊಂದ ಮಹಿಳೆ ಕಾಳಮ್ಮ ಅವರಿಗೆ 12000 ರೂ.ಗಳ ಪರಿಹಾರವನ್ನು ಸಹ ಘೋಷಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.




