Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಸಹಕಾರ ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ನಿಂಗರಾಜು ನೇಮಕ

ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ನಡೆದ ಮಂಡ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜೆ.ಜೆ.ನಿಂಗರಾಜು ಮತ್ತು ತಂಡದ ಪದಾಧಿಕಾರಿಗಳ ಅನುಸ್ಥಾಪನಾ ಸಮಾರಂಭ ಕಾರ್ಯಕ್ರಮ ನಡೆಯಿತು.

ಶಂಕರಗೌಡರ ಕೊಡುಗೆ ಅಪಾರ

ಮಂಡ್ಯ ಜಿಲ್ಲೆಗೆ ಕೆ.ವಿ. ಶಂಕರಗೌಡರವರ ಕೊಡುಗೆ ಅಪಾರವಾದುದು. ಅವರನ್ನು ನೋಡಿದಾಗ ನಮ್ಮಲ್ಲಿ ಏನಾದರೂ ಸಾಧಿಸಬೇಕು ಎಂಬಂತಹ ಹಂಬಲ ಬರುತ್ತದೆ. ಉತ್ತಮವಾದ ಮಾರ್ಗದರ್ಶಕರಿದ್ದರೆ, ಉತ್ತಮ ನಾಯಕರನ್ನು ಸೃಷ್ಟಿಸಲು ಸಾಧ್ಯ ಎಂದು ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಕೆ.ದೇವೇಗೌಡ ಅವರು ತಿಳಿಸಿದರು.

ಇದೇ ವೇಳೆ ನೂತನ ಅಧ್ಯಕ್ಷರಾದ ಜೆ.ಜೆ ನಿಂಗರಾಜು ಮಾತನಾಡಿ, ಮಂಡ್ಯ ಸಹಕಾರ ಲಯನ್ಸ್ ಸಂಸ್ಥೆಯ ಅಧ್ಯಕ್ಷನಾಗಿ ಸಂಸ್ಥೆಯ ಮುಂದಾಳತ್ವವನ್ನು ವಹಿಸಿಕೊಂಡಿರುವುದು ಬಹಳ ಸಂತೋಷವಾಗಿದೆ ಎಂದರು.

ಚಿರಪರಿಚಿತರಾದ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಲಯನ್‌ ಡಿ.ಸುರೇಶ್‌ರವರು ಕಳೆದ 6 ವರ್ಷಗಳ ಹಿಂದೆ ಮಂಡ್ಯ ಸಹಕಾರಿ ಲಯನ್ಸ್ ಸಂಸ್ಥೆಗೆ ನನ್ನನ್ನು ಸೇರ್ಪಡೆಗೊಳಿಸಿ, ಸಂಸ್ಥೆಯ ಬಗ್ಗೆ ಯಾವುದೇ ಅರಿವು ಇಲ್ಲದಿರುವ ನನಗೆ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಸಂಸ್ಥೆಯಲ್ಲಿ ನಡೆಯುವ ಸೇವಾಕಾರ್ಯಗಳ ಬಗ್ಗೆ ಅರಿವು ಮೂಡಿಸಿದರು. ಅಂದಿನಿಂದ ನಾನು ಸಹಕಾರ ಲಯನ್ಸ್ ಸೇವಾಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತೇನೆ. ಇನ್ನೂ ಹೆಚ್ಚಿನ ಸೇವಾಕಾರ್ಯಗಳನ್ನು ಮಾಡುವ ಹಂಬಲ ನನ್ನಲ್ಲಿದೆ ಎಂದರು.

ಸುಮಾರು 3 ವರ್ಷಗಳಿಂದಲೂ ಕೋವಿಡ್ ಕಾರಣದಿಂದ ಸೇವಾ ಕಾರ್ಯಗಳು ಅಂದುಕೊಂಡಂತೆ ನಡೆಸಲು ಸಾಧ್ಯವಾಗಿರುವುದಿಲ್ಲ. ಸಂಸ್ಥಾಪಕ ಅಧ್ಯಕ್ಷರು ಹಾಗೂ ನನ್ನ ಮಾತೃ ಸಂಸ್ಥೆಯ ಎಲ್ಲಾ ಸದಸ್ಯರ ಮಾರ್ಗದರ್ಶನದೊಂದಿಗೆ ನನ್ನ ಸೇವಾವಧಿಯಲ್ಲಿ ಇನ್ನು ಹೆಚ್ಚು ಸದಸ್ಯರನ್ನು ಸಂಘಟಿಸಿ, ಸಂಸ್ಥೆಗೆ ಸೇರ್ಪಡೆಗೊಳಿಸಿ, 2022-23ನೇ ಸಾಲಿನಲ್ಲಿ ಹೆಚ್ಚು ಹೆಚ್ಚು ಸೇವಾಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಕಾರ್ಯಗತಗೊಳಿಸಲಿದ್ದೇನೆ. ಇದಕ್ಕೆ ನಿಮ್ಮ ಸಹಕಾರ ಸದಾ ಹೀಗೇ ಇರಲೆಂದು ಆಶಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಪರಿವೀಕ್ಷರಾದ ಮಾದೇಗೌಡ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ನಾಗಭೂಷಣ್ ರವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ ಜಿ.ಎ.ರಮೇಶ್,ಲಯನ್ ಕೃಷ್ಣೆಗೌಡ, ಲಯನ್ ಸೋಮಶೇಖರ್ ಎಂ.ಸಿ, ಲಯನ್ ಎನ್.ಸುಬ್ರಹ್ಮಣ್ಯ,ಲಯನ್‌ ಡಿ.ಸುರೇಶ್‌,ಲಯನ್ ಹನುಮಂತಯ್ಯ,ಲಯನ್ ಕೆ.ಎಲ್.ರಾಜಶೇಖರ್, ಲಯನ್ ಎಸ್‌.ಕೆ.ರಾಜು,ಲಯನ್ ಎಸ್‌.ಎಂ. ಶಂಕರೇಗೌಡ, ಕಾರ್ಯದರ್ಶಿಜಿ.ಕೆ. ನಾಗೇಶ್, ಲಯನ್ ಚಿದಾನಂದ ಸೇರಿದಂತೆ ಇತರರು ಹಾಜರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ