Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾಸ್ಪತ್ರೆ | ನವಜಾತ ಶಿಶುಗಳಿಗೆ ಲಸಿಕೆ – ಪೋಷಕರ ಆತಂಕ ಶಮನ

ವರದಿ : ನ.ಲಿ.ಕೃಷ್ಣ

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾದ ನವಜಾತ ಶಿಶುಗಳಿಗೆ ಹಾಕಬೇಕಾದ ಲಸಿಕೆ ವಿಳಂಬ ಕುರಿತು ಪೊಷಕರ ಆಕ್ರೊಶಕ್ಕೆ ಕಾರಣವಾಗಿದ್ದ ಮಂಡ್ಯ ಜಿಲ್ಲಾ ಆಸ್ಪತ್ರೆಯ ಆಡಳಿತ ಕೊನೆಗೂ ಎಚ್ವೆತ್ತು ಕೊಂಡು ನವಜಾತ ಶಿಶುಗಳಿಗೆ ಇಂದು ಬೆಳಗಿನಿಂದಲೆ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.

ಎನ್ ಎಚ್ ಎಮ್ ನಲ್ಲಿ‌ ಕಾರ್ಯ ನಿರ್ವಹಿಸುವ ದಾದಿಯರು ಮುಷ್ಕರದಲ್ಲಿ ಭಾಗಿಯಾದ ಕಾರಣಕ್ಕೆ ಕಳೆದ ಮೂರು ನಾಲ್ಕು ದಿನಗಳಿಂದ ಲಸಿಕೆ ಹಾಕದೆ ನಿರ್ಲಕ್ಷ್ಯ ತೊರಿದ ಜಿಲ್ಲಾಆಸ್ಪತ್ರೆ ಧೋರಣೆ ಕುರಿತು ನಿನ್ನೆಯಷ್ಟೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಮದ್ದೂರಿನ ಸರ್ಕಾರಿ ಆಸ್ಪತ್ರೆಯ “ಮದ್ದಿ‌ನ ಮನೆ ನೆರವಿಗರ ಕೂಟ” ವಾದ ಸ್ವಯಂಸೇವಾ ತಂಡಕ್ಕೆ ಈ ಕುರಿತು ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ನೆರವಿಗರಕೂಟದ ಸದಸ್ಯರಾದ ಮಂಡ್ಯದ ಎಂ ಬಿ ನಾಗಣ್ಣಗೌಡ ಹಾಗೂ ಮದ್ದೂರಿನ ತಿಪ್ಪೂರು ಮನು ಇವರು ಆಸ್ಪತ್ರೆಯ ಅಧಿಕಾರಿಗಳು ನಿರ್ದೆಶಕರ ಗಮನಕ್ಕೆ ಈ ವಿಚಾರವನ್ನು ತಂದು, ನವಜಾತ ಶಿಶುಗಳಿಗೆ ಲಸಿಕೆ ಹಾಕುವಲ್ಲಿ ಆಗಿರುವ ವ್ಯತ್ಯಯ ಕುರಿತು ತಿಳಿಸಿದ್ದರು. ಈ ಕುರಿತು ನುಡಿ ಕರ್ನಾಟಕ.ಕಾಂ ಕೂಡ ಸುದ್ದಿ ಮಾಡಿ ಸಂಬಂಧಿಸಿದವರ ಗಮನ ಸೆಳೆದಿತ್ತು.

ಈ ಹಿನ್ನೆಲೆಯಲ್ಲಿ ಆದ ವ್ಯತ್ಯಯದ ಬಗ್ಗೆ ಒಪ್ಪಿಕೊಂಡು ಸೋಮವಾರ ಪರ್ಯಾಯ ಸಿಬ್ಬಂದಿ ಬಳಸಿ ಲಸಿಕೆ ಹಾಕಿಸಲು ಕ್ರಮ ವಹಿಸಲಾಯಿತು. ಇಂದು ಲಸಿಕೆ ಹಾಕುವ ಕಾರ್ಯ ಆರಂಭಿಸುತ್ತಿದಂತೆ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ