Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯನ್ನು ಜೀತ ಮುಕ್ತ ಜಿಲ್ಲೆಯನ್ನಾಗಿಸೋಣ: ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು

ಯಾವುದೇ ವ್ಯಕ್ತಿಯನ್ನು ಜೀತ ಪದ್ಧತಿಗೆ ಪ್ರೇರೆಪಿಸುವುದು ಅಥವಾ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಶೋಷಣೆ ಮಾಡಿ ದುಡಿಮೆ ಮಾಡಿಸಿಕೊಳ್ಳುವುದು ಕಂಡು ಬಂದಲ್ಲಿ ತಕ್ಷಣ ಅವರ ಮೇಲೆ ಕ್ರಮ ಜರುಗಿಸಿ, ಜೀತದಾಳುಗಳಿಗೆ ಜೀತ ವಿಮುಕ್ತಿ ನೀಡಿ ಜಿಲ್ಲೆಯನ್ನು ಮುಕ್ತ ಜಿಲ್ಲೆಯನ್ನಾಗಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯಂದು ಜೀತ ಪದ್ಧತಿ ನಿರ್ಮೂಲನೆ ಮತ್ತು ಜೀತ ವಿಮುಕ್ತರ ಪುನರ್ವಸತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜೀತ ಪದ್ಧತಿ ಸಮಾಜಿಕ ಆರ್ಥಿಕ ಪಿಡುಗು. ಜೀತ ಪದ್ದತಿ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಕಾನೂನು ರೀತ್ಯ ಕ್ರಮ ಜರುಗಿಸಿ ಜೀತ ಪದ್ಧತಿಗೆ ಒಳಗಾದವರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಮತ್ತು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವನ್ನು ನೀಡಲಾಗಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ತನ್ನ ಬದುಕನ್ನು ನಡೆಸಬೇಕು. ಯಾವುದೇ ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ದುಡಿಮೆ, ಶೋಷಣೆ, ಅಮಾನವೀಯವಾಗಿ ನಡೆಸಿಕೊಳ್ಳಬಾರದು. ಇದೇ ಜೀತ ನಿರ್ಮೂಲನೆ ಕಾರ್ಯಗಾರದ ಉದ್ದೇಶ ಎಂದರು.

ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ಮನುಷ್ಯನು ಕೂಡ ಘನತೆಯಿಂದ ಬದುಕಬೇಕೆಂಬುದು ಸಂವಿಧಾನದ ಆಶಯವಾಗಿದೆ. ಅದಕ್ಕಾಗಿ ಜೀತ ವಿಮುಕ್ತಿ ಪಡೆದವರು ಸರ್ಕಾರದ ಸೌಲಭ್ಯವನ್ನು ಉಪಯೋಗಿಸಿಕೊಂಡು ಘನತೆಯುಕ್ತ ಬದುಕನ್ನು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದರು.

ಭಾರತದಲ್ಲಿ ಅತೀ ಹೆಚ್ಚು ಜೀತ ಪದ್ಧತಿಗೆ ಒಳಗಾದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಕಾರಣ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಜೀತ ಪದ್ಧತಿಗೆ ಒಳಗಾಗಿರುತ್ತಾರೆ. ಭಾರತ ದೇಶಕ್ಕೆ ಜೀತ ಪದ್ಧತಿ ಸಾಮಾಜಿಕ ಮತ್ತು ಆರ್ಥಿಕ ಪೀಡುಗಾಗಿದೆ. ಜೀತ ಪದ್ಧತಿಯನ್ನು ನಿರ್ಮೂಲನಾ ಮಾಡಿ ಭಾರತ ದೇಶವನ್ನು ಉನ್ನತ ಮಟ್ಟಕ್ಕೆರಿಸೋಣ ಎಂದರು.

ಜೀತ ವಿಮುಕ್ತರಾದವರು ಪುನಃ ಜೀತ ಪದ್ಧತಿಗೆ ಸಿಲುಕಬಾರದು. ವಿವಿಧ ಇಲಾಖೆಯಿಂದ ಸಿಗುವ ಸಲಭ್ಯಗಳು, ಸಹಾಯಧನ ಪಡೆದು ಜೀವನದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.

ಕೆಲಸಕ್ಕಾಗಿ ಯಾವುದೇ ನಿಗದಿತ ಸಂಬಳ ಅಥವಾ ಕೂಲಿ‌ ನೀಡದೇ ಸರಿಯಾದ ಮೂಲಭೂತ ವ್ಯವಸ್ಥೆ ಒದಗಿಸದೇ ಒಂದು ಕಡೆ ಬಂಧಿಸಿ ಕೆಲಸ ಮಾಡಿಸುತ್ತಿದ್ದವರನ್ನು ಗುರುತಿಸಿ ಹಾಸನ ಉಪವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಮುಖ್ಯವಾಹಿನಿಗೆ ತರಲಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ ಬಾಬು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ.ಬಿ, ಜಿಲ್ಲಾ ಕೃಷಿ ಅಧಿಕಾರಿಗಳಾದ ಡಾ.ವಿ.ಎಸ್ ಅಶೋಕ್, ಯೋಜನೆ ನಿರ್ದೇಶಕರಾದ ಧನರಾಜು, ಸಹಾಯಕ ಕಾರ್ಯದರ್ಶಿ ಮೋಹನ್, ಮದ್ದೂರು ತಾಲ್ಲೂಕು ತಹಸಿಲ್ದಾರ್ ನರಸಿಂಹಮೂರ್ತಿ ಸೇರಿದಂತೆ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!