ಇದೇ ವೇಳೆ, ಭೂಮಿಯನ್ನು ನ್ಯಾಯಾಲಯ ನಿರ್ಮಾಣಕ್ಕೆ ನೀಡ ಬಾರದು ಎಂಬ ಒತ್ತಾಯದೊಂದಿಗೆ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸಭೆ ನಡೆಸಿದರು.
‘ತೋಟಗಾರಿಕೆ ಇಲಾಖೆಯ ಜಮೀನು ಮಂಜೂರಾಗಿ ಹಲವು ತಿಂಗಳಾಗಿದ್ದರೂ ಹಸ್ತಾಂತರವಾಗಿಲ್ಲ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಾಗದ ಕೊರತೆ ಇದ್ದು ಕಲಾಪಕ್ಕೆ
ತೊಂದರೆಯಾಗುತ್ತಿದೆ.ಸರ್ಕಾರ ಬಿಡುಗಡೆ ಮಾಡಿರುವ ಹಣವೂ ವಾಪಸ್ ಹೋಗುತ್ತಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಅಸಮಾಧಾನ ವ್ಯ
ಸಭೆಯಲ್ಲಿ ಯಾರೆಲ್ಲಾ ಇದ್ದರು?
‘ನಗರದ ಹೃದಯ ಭಾಗದಲ್ಲಿ ಸುಂದರ ಹಸಿರು ವಾತಾವರಣ ಸೃಷ್ಟಿ ಸಿರುವ ತೋಟಗಾರಿಕೆ ಇಲಾಖೆಯ ಒಂದಿಂಚೂ ಭೂಮಿಯನ್ನು ಅನ್ಯ ಉದ್ದೇಶಕ್ಕೆ ನೀಡಬಾರದು. ತೋಟ ಗಾರಿಕೆ ಆಸ್ತಿ ಉಳಿಸಿಕೊಳ್ಳಲು ಜಿಲ್ಲೆ ಯಾದ್ಯಂತ ಹೋರಾಟ ರೂಪಿಸ ಲಾಗಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಕೈಜೋಡಿಸಬೇಕು. ಯಾವುದೇ ಪರ್ಯಾಯ ಭೂಮಿಯಲ್ಲಿ ಕೋರ್ಟ್ ನಿರ್ಮಾಣಕ್ಕೆ ಭೂಮಿ ಕೊಡಲಿ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ಜೆಡಿಎಸ್ ಮುಖಂಡ ಜಿ.ಬಿ.ಶಿವಕುಮಾರ್, ರೈತ ನಾಯಕಿ ಸುನಂದಾ ಜಯರಾಂ ಇದ್ದರು.