ಮಂಡ್ಯ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿದ ಸಾವಿಗೆ ಕಾರಣನಾದ ಆರೋಪಿಗೆ 2 ವರ್ಷ ಸಜೆ ಹಾಗೂ ಎರಡೂವರೆ ಲಕ್ಷ ದಂಡ ವಿಧಿಸಿ ನಗರದ ಪೋಕ್ಸೋ ನ್ಯಾಯಾಲಯ ಸೋಮವಾರ ಮಧ್ಯಾಹ್ನ ಆದೇಶ ಮಾಡಿದೆ.
ರವಿ ಎಂಬುವವರೇ ಶಿಕ್ಷೆಗೆ ಒಳಗಾದವರು. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಂದು 14 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಕಿರುಕುಳ ನೀಡಲಾಗಿತ್ತು.

ಘಟನೆಯಿಂದ ನೊಂದ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಅಂದಿನ ಡಿವೈಎಸ್ಪಿ ವಿಶ್ವನಾಥ್ ಕೆ.ಬಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ನಗರದ ವಿಶೇಷ ಫೋಕ್ಸೋ ನ್ಯಾಯಾಲಯ-1 ರ ನ್ಯಾಯಾಧೀಶರಾದ ಶಬಾನಾ ಬೇಗಂ ಲಾಡ್ ಖಾನ್ ಅವರು ವಿಚಾರಣೆ ನಡೆಸಿ ಐಪಿಸಿ 305ರಡಿ ಅಪರಾಧಕ್ಕಾಗಿ 2 ವರ್ಷ ಸಾದಾ ಸಜೆ ಹಾಗೂ 50 ಸಾವಿರ ದಂಡ ವಿಧಿಸಿದ್ದಾರೆ.
ಮೃತ ಬಾಲಕಿಯ ತಾಯಿಗೆ 2 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.
ಅಭಿಯೋಜನೆ ಪರ ವಿಶೇಷ ಸರ್ಕಾರಿ ವಕೀಲರಾದ ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು.




