Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತಮಿಳು ಕಾಲೋನಿ ವಿಚಾರವಾಗಿ ಗೊಂದಲ ಸೃಷ್ಠಿ ; ವೆಂಕಟೇಶ್

ಮಂಡ್ಯ ನೆಹರು ನಗರದ ಬಳಿ ಇರುವ ತಮಿಳು ಕಾಲೋನಿ ವಿಚಾರವಾಗಿ ಕೆಲ ಸಂಘಟನೆಗಳು ವಿನಃ ಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದು, ಈ ಸಂಬಂಧ ಪ್ರಕರಣ ಹೈಕೋರ್ಟಿನಲ್ಲಿದ್ದು, ನಾಯಾಲಯದ ತೀರ್ಪಿಗೆ ಬದ್ದರಾಗಿದ್ದೇವೆ ಎಂದು ತಮಿಳು ಕಾಲೋನಿ ಜೈ ಭೀಮ್ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೩೩ರಂದು ಮಹಾರಾಜರು ಕೆಆರ್‌ಎಸ್ ಕಟ್ಟಲು ಬಂದ ತಮಿಳರಿಗೆ ಸದರಿ ಸ್ಥಳವನ್ನು ನೀಡಿದ್ದು, ಇದೀಗ ತೆರವುಗೊಳಿಸುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದರು.

ಸದರಿ ಸ್ಥಳದ ಸಂಬಂಧ ೧೯೭೩ರಲ್ಲಿ ಮಂಡ್ಯ ನಗರಸಭೆಗೆ ಹಣ ಪಾವತಿ ಮಾಡಿದ್ದು, ೧೯೯೬ರಲ್ಲಿ ನ್ಯಾಯಾಲಯದ ಮೂಲಕ ಸ್ಥಳವು ತಮಿಳು ಕಾಲೋನಿಯ ನಿವಾಸಿಗಳಿಗೆ ಸೇರಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ ೨೦೧೫ರಲ್ಲಿ ತಮಿಳು ಕಾಲೋನಿಯರವರನ್ನು ಕೈಬಿಟ್ಟು ಸ್ಲಂ ಬೋರ್ಡ್ ಅನ್ನು ಪ್ರತಿವಾದಿಯಾಗಿಸಿ ಮಿಮ್ಸ್‌ಗೆ ಸ್ಥಳ ತೆರವು ಮಾಡಿಕೊಡಬೇಕೆಂಬ ಆದೇಶ ನೀಡಲಾಗಿತ್ತು. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೆಲವು ಸಂಘಟನೆಗಳು ಜನಜಾಗೃತಿ ಹೆಸರಿನಲ್ಲಿ ತಪ್ಪು ಸಂದೇಶವನ್ನು ನೀಡುತ್ತಿದ್ದು, ಈ ಸಂದೇಶ ಸತ್ಯಕ್ಕೆ ದೂರ ಎಂದು ಮನವರಿಕೆ ಮಾಡುವ ಜತೆಗೆ ಹೈಕೋರ್ಟ್ ನೀಡುವ ತೀರ್ಪಿಗೆ ಬದ್ದರಿದ್ದೇವೆ. ಅನ್ಯಾಯವಾದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬುದ್ಧ ಭಾರತೀಯ ಫೌಡೇಷನ್ ಅಧ್ಯಕ್ಷ ಜೆ.ರಾಮಯ್ಯ, ವಕೀಲ ಲಕ್ಷ್ಮಣ್ ಚೀರನಹಳ್ಳಿ, ಶ್ರೀನಿವಾಸ್, ಮೋಹನ್, ಸುರೇಶ್, ಶ್ರೀಕಾಂತ್, ಓಂಪ್ರಕಾಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ