Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮುಡಾ ಅಧಿಕಾರಿಗಳಿಂದ ಅನಧಿಕೃತ ಅಂಗಡಿ ಮಳಿಗೆ ತೆರವು

ಮಂಡ್ಯ ನಗರದ ಹೊಳಲು ರಸ್ತೆಯಲ್ಲಿ ಮುಡಾಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆ ಮುಡಾ ಅಧಿಕಾರಿಗಳು ತೆರವುಗೊಳಿಸಿದರು.

ಅನಧಿಕೃತ ಮಳಿಗೆಗಳು

ಮಂಡ್ಯದ ಕೆರೆ ಅಂಗಳದ ವಿವೇಕಾನಂದ ಬಡಾವಣೆಗೆ ಹೊಳಲು ರಸ್ತೆಯ ಮೂಲಕ 80 ಅಡಿಯ ರಸ್ತೆಯನ್ನು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ. ಈ 80 ಅಡಿ ರಸ್ತೆಯಲ್ಲಿಯೇ ಅಂಗಡಿಗಳನ್ನು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿತ್ತು.

ಈ ಅಂಗಡಿ ಮಳಿಗೆಯ ಮಾಲೀಕರಿಗೆ ಮುಡಾಗೆ ಸೇರಿದ ರಸ್ತೆಯಲ್ಲಿ ಅಂಗಡಿ ಮಳಿಗೆ ನಿರ್ಮಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಮಾಲೀಕರು ನಮಗೆ ಮುಡಾ ನಿವೇಶನ ಬೇರೆಡೆ ಬೇಡ. ನಮಗೆ ಇಲ್ಲೇ ಕೊಡುವಂತೆ ಹಠ ಹಿಡಿದಿದ್ದರು. ಅನಧಿಕೃತವಾಗಿ ಅಂಗಡಿ ಮಳಿಗೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮುಡಾಗೆ ದೂರು ನೀಡಿದ್ದರು.

ಅನಧಿಕೃತ ಮಳಿಗೆಗಳನ್ನು ನೆಲಸಮ ಮಾಡಿರುವ ದೃಶ್ಯ

ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಮುಡಾ ಆಯುಕ್ತ ಕೃಷ್ಣ ಕುಮಾರ್ ನೇತೃತ್ವದಲ್ಲಿ ಮುಡಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ‌ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿ-ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ