ನಾವು ವಿವಿ ಮುಚ್ಚಲ್ಲ, ನಮ್ಮ ಜಿಲ್ಲೆಯ ಯುವಕರಿಗೆ ಮಂಡ್ಯ ವಿವಿ ಇದ್ದೆ ಇರುತ್ತೆ. ಯಾವುದೇ ಕಾರಣಕ್ಕೂ ಮಂಡ್ಯ ವಿವಿ ಮುಚ್ಚುವ ಪ್ರಶ್ನೇ ಇಲ್ಲ ಎಂದು ಶಾಸಕ ರವಿಕುಮಾರ್ ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದ ಕಮಾನು ಹಾಗೂ ಸಂಪರ್ಕ ರಸ್ತೆಗಳ 3 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡ್ಯ ವಿವಿ ಆವರಣದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳ ಸೇರಿಸಿ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡ್ತೇವೆ, ಮಂಡ್ಯ ವಿವಿಯ ಮುಖ್ಯ ದ್ವಾರ ಹಾಗೂ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಮಂಡ್ಯ ವಿವಿ ಮುಚ್ಚೊಯ್ತು ಅನ್ನೋರಿಗೆ ಇದೇ ಉತ್ತರ ಎಂದು ಬಿಜೆಪಿ-ಜೆಡಿಎಸ್ ಮುಖಂಡರಿಗೆ ಟಾಂಗ್ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಮಾತನಾಡಿ , ಶಾಸಕರು ಮಂಡ್ಯ ವಿವಿ ಮುಚ್ಚಲ್ಲ ಎನ್ನುವ ಉತ್ತರ ಕೊಟ್ಟಿದ್ದಾರೆ. ಇವತ್ತು ಶಾಸಕರು ಮಂಡ್ಯ ಮಹಾದ್ವಾರಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. 5 ಸಾವಿರ ಜನ ಮಕ್ಕಳು ಇಲ್ಲಿ ಇದ್ದಾರೆ. ನಮ್ಮ ಜಿಲ್ಲೆಯ ಹೆಮ್ಮೆ, ನಮ್ಮ ವಿವಿ ಇರಲಿ ಯಾವುದೇ ಕಾರಣಕ್ಕೂ ಮಂಡ್ಯ ವಿವಿ ಮುಚ್ಚಬೇಡಿ. ಮುಖ್ಯಮಂತ್ರಿಗಳು ಮಂಡ್ಯ ವಿವಿಗೆ ಹೆಚ್ಚಿನ ಅನುದಾನ ಕೊಟ್ಟು ವಿವಿ ಉಳಿಸಿ ಎಂದು ಮನವಿ ಮಾಡಿದರು.
ಇದ್ದಕು ಮುನ್ನ ಕಾಲೇಜಿಗೆ ಆಗಮಿಸಿದ ಶಾಸಕ ಗಣಿಗ ರವಿಕುಮಾರ್ ಗೆ ವಿದ್ಯಾರ್ಥಿಗಳಿಂದ ಅದ್ದೂರಿ ಸ್ವಾಗತ ಮಾಡಿದರು.
ಈ ಸಂದರ್ಭದಲ್ಲಿ ಕುಲಪತಿ ಶಿವಚಿತ್ತಪ್ಪ,ಯೋಗನರಸಿಂಹ, ವೀಣಾ, ಸ್ವರ್ಣ, ಪ್ರೊ.ನಾಗರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.




