Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆಗೆ ಬಿಎಸ್‌ಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ- ಮಾರಸಂದ್ರ ಮುನಿಯಪ್ಪ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಇತರ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಮಂಡ್ಯ ನಗರದ ಪ್ರತಿಕಾ ಭವನದಲ್ಲಿ ಜಿಲ್ಲಾ ಬಿಎಸ್ಪಿ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗೆ ಪಕ್ಷವನ್ನು ಬಲವರ್ಧನೆಗೊಳಿಸಲು ರಾಜ್ಯಾದ್ಯಂತ ಕಾರ್ಯಕರ್ತರರನ್ನು ಸನ್ನದ್ದುಕೊಳಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ನಿರಿಕ್ಷಿಸಿದ್ದಷ್ಟು ಗೆಲುವು ಮತ್ತು ಮತಗಳು ಲಭ್ಯವಾಗಲಿಲ್ಲ, ಬಹುಜನ ಸಮಾಜ ಪಕ್ಷದಿಂದ 5 ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶ ಲಭ್ಯವಾಗಿತ್ತು, ಆದರೆ ಕಳೆದ ಬಿಎಸ್ಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು, ನಂತರ ಕೈಬಿಟ್ಟಿದ್ದರಿಂದ ಜೆಡಿಎಸ್ ಶೀಟುಗಳು ಕುಸಿದವು ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್- ಬಿಜೆಪಿಗರು ಶ್ರೀಮಂತರಿಂದ ಹಣ ತಂದು ಚುನಾವಣೆಯಲ್ಲಿ ಹಾಕುತ್ತಾರೆ, ಬಿಎಸ್ಪಿಯವರು ಸಂವಿಧಾನದ, ಅಂಬೇಡ್ಕರ್‌ ಬಗ್ಗೆ ಮಾತನಾಡಿ ಮತದಾರರಿಂದಲೇ ಒಂದು ರೂ.ಪಡೆದು, ಮತ ಕೇಳಿ ಸ್ವಾಭಿಮಾನ ಹೆಚ್ಚಿಸುತ್ತಿದೆ ಎಂದರು.

ವಿಧಾನಸಭೆ ಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನಂಬಿ ಮತದಾರರು ಮತಹಾಕಿ ಕಾಂಗ್ರೆಸ್ ಗೆಲ್ಲಿಸಲು ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು ಒಗ್ಗೂಡಿ ಮತ ಹಾಕಿ ಅಧಿಕಾರ ನೀಡಿದ್ದಾರೆ, ಕಾಂಗ್ರೆಸ್ ಸರ್ಕಾರ ತಂದು ಈಗ ಅನುಭವಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ರಾಜ್ಯ ಉಸ್ತುವಾರಿ ಹಾಗೂ ಸಂಯೋಜಕ ಎಂ.ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ಜಿಲ್ಲಾ ಉಸ್ತುವಾರಿ ಎಂ.ವೆಂಕಟೇಶ್, ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ರಾಜ್ಯ ಪ್ರ.ಕಾರ್ಯದರ್ಶಿ ಮುನಿಯಪ್ಪ, ಹ.ರಾ.ಮಹೇಶ್, ಜಿಲ್ಲಾ ಸಂಯೋಜಕ ಚಲುವರಾಜ್, ಸೋದರತ್ವ ಸಮಿತಿ ಜಿಲ್ಲಾಧ್ಯಕ್ಷ ರವಿಗೌಡ, ಜಿಲ್ಲಾ ಕಾರ್ಯದರ್ಶಿ ಆನಂದ, ವೀರಭದ್ರಯ್ಯ, ಲೋಕೇಶ್, ಗೋವಿಂದರಾಜ್, ಅನಿಲ್‌ಕುಮಾರ್, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!