ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದ ಮಹಿಳೆ ಲಕ್ಷ್ಮಿ ಎಂಬುವರು ತನ್ನ ಮಗಳಾದ ವಿಜಯಲಕ್ಷ್ಮಿ ಸಾವಿಗೆ ಪೋಲಿಸ್ ಠಾಣೆಗಳಲ್ಲಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮನನೊಂದ ಕಳೆದ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದಕ್ಕೆ ನೇರವಾಗಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದ್ದು, ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಆಗ್ರಹಿಸಿದರು.
ಈ ಘಟನೆಯ ಕುರಿತು ಸೋಮವಾರ ಮಂಡ್ಯ ಎಸ್ಪಿ ಕಚೇರಿಗೆ ದೂರು ನೀಡಿದ ಅವರು, ಈ ಪ್ರಕರಣದಲ್ಲಿ ಪೋಲಿಸ್ ಇಲಾಖೆಯ ವೈಫಲ್ಯ ಎದ್ದುಕಾಣುತ್ತದೆ, ಮಂಡ್ಯ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ದೂರಿದರು.
ಕಳೆದ 2ಫೆಬ್ರವರಿ 21 ರಂದು ಮಂಡ್ಯ ರೈಲ್ವೆ ಸ್ಟೇಷನ್ ನಲ್ಲಿ ಮಂಡ್ಯ ತಾಲ್ಲೂಕಿನ ಹೆಬ್ಬಕವಾಡಿಯ ನಂಜುಂಡೇಗೌಡ ಹಾಗು ಲಕ್ಷ್ಮಿ ಅವರ ಮಗಳಾದ ವಿಜಯಲಕ್ಷ್ಮಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರು, ಈಕೆಯ ಸಾವಿಗೆ ಮಂಡ್ಯ ತಾಲ್ಲೂಕಿನ ಮಾರಸಿಂಗನಹಳ್ಳಿ ಹರಿಕೃಷ್ಣ ಎಂಬ ಯುವಕ ಕಾರಣನಾಗಿದ್ದಾನೆಂದು ಮೃತ ಯುವತಿಯ ಪಾಲಕರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರನ್ನು ಕೊಡಲು ಬಂದಂತ ಸಂದರ್ಭದಲ್ಲಿ ಸಾಂಕೇತಿವಾಗಿ ದೂರನ್ನು (N.C.R ) ದಾಖಲಿಸಿ, ಉನ್ನತಮಟ್ಟದ ತನಿಖೆಗೆ ಮುಂದಾಗದೆ ಈ ಪ್ರಕರಣ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಅಂತ ಹೇಳಿ, ಈ ಠಾಣೆ ಯವರು ಆ ಠಾಣೆಯವರು ಮೇಲೆ ಸಬೂಬುಗಳನ್ನ ಹೇಳಿ ಸಂತ್ರಸ್ತ ಕುಟುಂಬಕ್ಕೆ ಯಾವುದೇ ರೀತಿಯ ನ್ಯಾಯ ಕೊಡಿಸುವು ಪ್ರಯತ್ನ ಮಾಡದಿರುವುದು ಕಂಡುಬಂದಿದೆ ಎಂದು ದೂರಿದರು.
ನಂತರದಲ್ಲಿ ಮೃತಳ ತಂದೆ ತಾಯಿ ಮತ್ತೆ ಗ್ರಾಮಾಂತರ ಠಾಣೆಗೆ ಬಂದು ಲಭ್ಯವಿದ್ದ ಸಾಕ್ಷಿಗಳನ್ನ ಒದಗಿಸಿ ಉನ್ನತಮಟ್ಟದ ತನಿಖೆಗೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದಾಗ, ಮಂಡ್ಯ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ, 20 ದಿನಗಳು ಕಳೆದರೂ ಯಾವುದೇ ರೀತಿಯ ಕ್ರಮಗಳು ತೆಗೆದುಕೊಳ್ಳದ ಹಿನ್ನಲೆಯಲ್ಲಿ ಬೇಸತ್ತು, ಡೆತ್ ನೋಟ್ ಬರೆದು ತನ್ನ ಮಗಳ ಹಾಗೂ ತನ್ನ ಸಾವಿಗೆ ನ್ಯಾಯ ಕೊಡಿಸಲು ಮನವಿ ಮಾಡಿ ಮೃತರ ತಾಯಿ ಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗಳ ಕರ್ತವ್ಯ ವೈಫಲ್ಯ ಹಾಗೂ ಬೇಜಾಬ್ದಾರಿತನವೇ ಕಾರಣವಾಗಿದೆ, ಆದ್ದರಿಂದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಆರ್’ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹೆಚ್ ಮಲ್ಲೇಗೌಡ ಹೆಬ್ಬಕವಾಡಿ,
ಕೆ.ಆರ್.ಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜು ಶಿವಪುರ, ಮಂಡ್ಯ ತಾಲ್ಲೂಕು ಪದಾಧಿಕಾರಿಗಳಾದ ರವೀಂದ್ರ ಕೊತ್ತತಿ, ಜಗದೀಶ್ ಎಸ್, ಜಯಪ್ರಕಾಶ, ರಮೇಶ್ ಉಮ್ಮಡಹಳ್ಳಿ, ಕಾಂತರಾಜು, ಮಲ್ಲಯ್ಯ, ಅಲೀಮ್,ಅಶೋಕ್ ಹಾಗು ದೀಪಿಕಾ, ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್, ಸಾಮಾಜಿಕ ಹೋರಾಟಗಾರರಾದ ರಘು.ಕೆ ಹಾಗೂ ಉಮಾಶಂಕರ್ ಹೆಬ್ಬಕವಾಡಿ ಉಪಸ್ಥಿತರಿದ್ದರು.




