Friday, October 18, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಮಳೆಯಿಂದ ರೈತರ ಬದುಕು ಹಸನಾಗಲಿ; ನರೇಂದ್ರಸ್ವಾಮಿ

ವರುಣನ ಕೃಪೆಯಿಂದ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದ್ದು, ನಾಡಿಗೆ ಸಮೃದ್ದಿಯಾಗಿ ಮಳೆಯಿಂದ ರೈತರ ಬದುಕು ಹಸನಆಗಲಿ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ದೊಡ್ಡಕೆರೆ, ಮಾರೇಹಳ್ಳಿ ಕೆರೆ, ಕೆಂಬುತಗೆರೆ ಕೆರೆ, ಅಂತರಳ್ಳಿ ಕೆರೆಗಳು ನೀರು ತುಂಬಿದ ಹಿನ್ನೆಲೆಯಲ್ಲಿ ಕೆರೆಗಳಿಗೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ವರುಣನ ಕೃಪೆ ತಡವಾದರೂ ಪ್ರಸ್ತುತದಲ್ಲಿ ಸಮೃದ್ದಿಯಾಗಿ ಮಳೆಯಾಗಿ ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿದಿದೆ, ಮುಂದಿನ ದಿನಗಳಲ್ಲಿಯೂ ಚೆನ್ನಾಗಿ ಮಳೆಯಾಗಿ ಬೆಳೆ ಚನ್ನಾಗಿ ಬರಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿದ್ದೇವೆ ಎಂದರು.

ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿವೆ, ಕಾಲುವೆಗಳ ಮೂಲಕ ಕೊನೆ ಭಾಗಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿದೆ, ಎಲ್ಲಾ ಸಮಸ್ಯೆಗಳಿಗೂ ಮಳೆಯೇ ಪರಿಹಾರವಾಗಿದ್ದು, ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ರೈತರ ಮೊಖದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಿದರು.

ಇದೇ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿಶ್ವಾಸ್, ಚಂದ್ರಕುಮಾರ್, ಪುರಸಭೆ ಸದಸ್ಯರಾದ ಶಿವಸ್ವಾಮಿ, ಪ್ರಮೀಳ, ರಾಜಶೇಖರ್ ಮುಖಂಡರಾದ ಕಿರಣ್‌ಶಂಕರ್, ಕೃಷ್ಣ, ದೀಪು ಮುಟ್ಟನಹಳ್ಳಿ ಅಂಬರೀಷ್, ಪುಟ್ಟಸ್ವಾಮಿ, ಜಗದೀಶ್ ಚೇತನ್, ಆನಂದ್, ಶಿವು, ಪ್ರಕಾಶ್, ಚನ್ನಪ್ಪ, ಕಾವೇರಿ ನೀರಾವರಿ ನಿಗಮದ ಎಇಇ ಭರತೇಶ್, ಪ್ರಮೀಣ್. ಲೋಕೋಪಯೋಗಿ ಇಲಾಖೆಯ ಎ ಇ ಇ ಹರೀಶ್. ಎ ಇ ಸೋಮಶೇಖರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!