Friday, September 20, 2024

ಪ್ರಾಯೋಗಿಕ ಆವೃತ್ತಿ

ಅರ್ಥಪೂರ್ಣ ಸಮಾಜಮುಖಿ ಜನ್ಮದಿನಾಚರಣೆ

ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನ್ಮದಿನಾಚರಣೆ ಮಾಡಿಕೊಳ್ಳುವುದು ಬಹಳ ಅರ್ಥಪೂರ್ಣವಾದುದು ಎಂದು ಹೈಕೋರ್ಟ್ ನ್ಯಾಯವಾದಿ ರಂಗನಾಥ ಪ್ರಸಾದ್ ಹೇಳಿದರು.

ಮಂಡ್ಯ ನಗರದಲ್ಲಿರುವ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಯುವ ಉದ್ಯಮಿ ಹೆಚ್.ಎನ್. ನರಸಿಂಹಮೂರ್ತಿ ಗೆಳೆಯರ ಬಳಗ ಆಯೋಜಿಸಿದ್ದ ಸಮಾಜ ಸೇವಕ ಹೆಚ್.ಎನ್. ನರಸಿಂಹಮೂರ್ತಿ ಜನ್ಮದಿನ ಪ್ರಯುಕ್ತ ವಯೋವೃದ್ಧರಿಗೆ ಹಣ್ಣು-ಹಂಪಲು-ಸಿಹಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿ ಬಡವರು-ಶ್ರೀಮಂತರು ಸೇರಿದಂತೆ ದುರ್ಬಲ ವರ್ಗದ ಜನರಿರುತ್ತಾರೆ. ಮಾನವೀಯತೆಯುಳ್ಳವರು ತನ್ನ ಜನುಮದಿನವನ್ನು ಸಮಾಜಮುಖಿಯಾಗಿ ಆಚರಿಸಿಕೊಂಡು ಅವಿಸ್ಮರಣೀಯಗೊಳಿಸಿಕೊಳ್ಳುವುದು ಅಪರೂಪವಾಗಿದೆ ಎಂದರು.

ಜೀವನದಲ್ಲಿ ಕೌಟುಂಬಿಕ ಸಮಸ್ಯೆಗಳಿಂದ ನೊಂದು ಆಸರೆಗಾಗಿ ಆಶ್ರಮಗಳತ್ತ ಬಂದಿರುವ ವಯೋವೃದ್ಧರ ನಡುವೆ ನಾವಿಂದು ಯುವ ಉದ್ಯಮಿ ಹೆಚ್.ಎನ್. ನರಸಿಂಹಮೂರ್ತಿ ಅವರ ಜನ್ಮದಿನವನ್ನು ಸರಳವಾಗಿ ಹಣ್ಣು-ಹಂಪಲು ವಿತರಿಸಿ ಆಚರಿಸುತ್ತಿದ್ದೇವೆ. ಮಾದರಿ ಯುವ ನಾಯಕರಾಗಿ ಬೆಳೆದು,ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂಬ ಆಶೀರ್ವಾದ ಹಿರಿಯರಿಂದ ಲಭಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಹೆಚ್.ಎನ್. ನರಸಿಂಹಮೂರ್ತಿ ಗೆಳೆಯರ ಬಳಗದ ಪದಾಧಿಕಾರಿಗಳಾದ ಸುಧಾಕರ್, ಗುಡಿಗೇನಹಳ್ಳಿ ಸ್ವಾಮಿ, ಗಂಗವಾಡಿ ಕುಮಾರ್, ಮುಳುಕಟ್ಟೆ ಅನಿಲ್, ಹೊಸಹಳ್ಳಿ ಪ್ರದೀಪ್, ಪ್ರಮೋದ್, ಲೋಕೇಶ್, ಡಾ.ಗಣೇಶ್, ಉಮೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!