Saturday, October 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಮೆಡಿಕಲ್ ವಿದ್ಯಾರ್ಥಿಗಳಿಗೆ ಕನ್ನಡ  ಸಾಹಿತ್ಯ ಪ್ರಜ್ಞೆ ಉಪನ್ಯಾಸ ಕಾರ್ಯಕ್ರಮ

ಕನ್ನಡತನವನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ನಾಡಿನ ಹಲವು ಕಡೆ ಒಳ್ಳೆಯ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ,  ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಖ್ಯೆ, ಯ ಸಹಯೋಗದೊಂದಿಗೆ ಪರಿಸರ  ರೂರಲ್ ಡೆವಲಪ್ ಮೆಂಟ್ ಸೊಸೈಟಿ(ರಿ)ಯ ಮಂಗಲ ಯೋಗೀಶ್  ಇದೇ 14.10.2024, ಸೋಮವಾರದಂದು  ಮಿಮ್ಸ್ ಸಭಾಂಗಣ, ಮೆಡಿಕಲ್ ಕಾಲೇಜು ಜಿಲ್ಲಾಸ್ಪತ್ರೆ ಆವರಣದಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಕನ್ನಡ  ಸಾಹಿತ್ಯ ಪ್ರಜ್ಞೆ ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಇಲ್ಲಿ ಬಂದು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವವರಿಗೆ, “ಕನ್ನಡ್ ಗೊತ್ತಿಲ್ಲ” ಅನ್ನುವವರಿಗೆ ಮೊದಲು ಕನ್ನಡ ಅಂದ್ರೇನು? ಕರ್ನಾಟಕ ಅಂದ್ರೇನು ಅಂತ ಪರಿಚಯಿಸುವ ಇಂಥ ಕಾರ್ಯಕ್ರಮಗಳು ರಾಜ್ಯದ ಎಲ್ಲ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲೂ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯದಲ್ಲಿ ನೂತನ ಪ್ರಯೋಗವೊಂದು ನಡೆಯುತ್ತಿದೆ.

ಹಿರಿಯರಾದ ಮ.ರಾಮಕೃಷ್ಣ ಮತ್ತು  ಡಾ.ಬಿ.ಆರ್.ರವಿಕಾಂತೇಗೌಡ, ಐಜಿಪಿ ಬೆಂಗಳೂರು ಕೇಂದ್ರ ವಲಯ ಇವರು ಯುವ ವೈದ್ಯ ವಿದ್ಯಾರ್ಥಿಗಳಿಗೆ ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಹಿರಿಮೆಯ ಕುರಿತು ಉಪನ್ಯಾಸ ನೀಡುತ್ತಿದ್ದಾರೆ. ಉನ್ನತ ಶಿಕ್ಷಣ ಸಂಪೂರ್ಣ ಆಂಗ್ಲಮಯವಾಗಿರುವ ಈ ಕಾಲದಲ್ಲಿ ಕನ್ನಡ ಉಳಿಸಿ, ಬೆಳೆಸುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಬನ್ನಿ ನುಡಿ ದೀಪ ಹಚ್ಚೋಣ ಎಂದು ಮಂಡ್ಯದ ಚಿತ್ರಕೂಟ ಬಳಗವು  ಆತ್ಮೀಯವಾಗಿ ಸ್ವಾಗತವನ್ನು ಕೋರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!