ಮೈಕ್ರೋ ಆರ್ಎನ್ಎ ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುಕುನ್ ಅವರನ್ನು 2024ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಜೀನ್ಗಳ ಪಾತ್ರ ಕುರಿತ ಮೂಲ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಈ ಜೋಡಿ ಕಂಡು ಹಿಡಿದ ಮೈಕ್ರೋ ಆರ್ಎನ್ಎಗೆ ಪ್ರಶಸ್ತಿ ಲಭಿಸಿದೆ.
BREAKING NEWS
The 2024 #NobelPrize in Physiology or Medicine has been awarded to Victor Ambros and Gary Ruvkun for the discovery of microRNA and its role in post-transcriptional gene regulation. pic.twitter.com/rg3iuN6pgY— The Nobel Prize (@NobelPrize) October 7, 2024
“>
ವೈದ್ಯಕೀಯ ನೊಬೆಲ್ ವಿಜೇತರನ್ನು ಸ್ವೀಡನ್ನ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು 11 ಮಿಲಿಯನ್ ಸ್ವೀಡಿಷ್ ಕ್ರೌನ್ಸ್ (1.1 ಮಿಲಿಯನ್ ಡಾಲರ್) ಬಹುಮಾನ ಮೊತ್ತ ಪಡೆಯಲಿದ್ದಾರೆ.
ಪ್ರತಿ ವರ್ಷ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮೊದಲನೆಯದಾಗಿ ಘೋಷಿಸಲಾಗುತ್ತದೆ. ವಿಜ್ಞಾನ, ಸಾಹಿತ್ಯ ಮತ್ತು ಮಾನವೀಯ ಸೇವೆಗಳಿಗೆ ನೀಡುವ ನೊಬೆಲ್ಗಿಂತ ವೈದ್ಯಕೀಯ ನೊಬೆಲ್ ಅತ್ಯಂತ ಪ್ರತಿಷ್ಠಿತವಾಗಿದೆ. ಇನ್ನುಳಿದ ಐದು ವಿಭಾಗಗಳ ಪ್ರಶಸ್ತಿಗಳು ಮುಂಬರುವ ದಿನಗಳಲ್ಲಿ ಘೋಷಣೆಯಾಗಬೇಕಿದೆ.
ಸ್ವೀಡಿಷ್ ಡೈನಮೈಟ್ ಆವಿಷ್ಕಾರಕ ಮತ್ತು ಉದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ ಪ್ರಾರಂಭಗೊಂಡ ಪ್ರತಿಷ್ಠಿತ ಪ್ರಶಸ್ತಿ ನೊಬೆಲ್ ಅನ್ನು, 1901 ರಿಂದ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಸ್ಥಾಪನೆಯ ಕಾರ್ಯಗಳಿಗೆ ನೀಡುತ್ತಾ ಬರಲಾಗುತ್ತಿದೆ. ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಯನ್ನೂ ನೀಡಲಾಗುತ್ತಿದೆ.