Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೌಶಲ್ಯತೆ ಬೆಳೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯಿರಿ: ಮೀರಾ ಶಿವಲಿಂಗಯ್ಯ

ಕೌಶಲ್ಯತೆಯಲ್ಲಿ ಭಾರತ ಮೊದಲಿನಿಂದಲೂ ಉನ್ನತ ಸಾಧನೆ ಮಾಡಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯಿರಿ ಎಂದು ಎಸ್.ಬಿ. ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ತಿಳಿಸಿದರು.

ಮಂಡ್ಯ ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್ ಎಸ್ ಟಿಎನ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎಸ್.ಬಿ.ಎಜುಕೇಶನ್ ಟ್ರಸ್ಟ್, ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನಡೆದ 2023 ನೇ ಸಾಲಿನ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು.

ಐಟಿಐ ಕಲಿತಿರುವವರಲ್ಲಿ ಕೌಶಲ್ಯತೆ, ಬುದ್ದಿವಂತಿಕೆ ಹಾಗೂ ಚಾಣಾಕ್ಷತೆ ಇಂಜಿನಿಯರ್ ಹಾಗೂ ಎಂಟಿಐ ಮಾಡಿರುವವರಿಗೂ ಇರಲ್ಲ, ಐಟಿಐ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವು
ದರಲ್ಲಿ ಯಾವುದೇ ಅನುಮಾನ ಇಲ್ಲ, ಐಟಿಐ ಮಾಡಿರುವವರಲ್ಲಿ ಅಹಂ ಎನ್ನುವುದು ಕಡಿಮೆ. ಅವರಲ್ಲಿ ಕಲಿಯುವ ಉತ್ಸಾಹ, ಸಾಧಿಸುವ ಚಲ ಇರುತ್ತದೆ ಎಂದು ಹೇಳಿದರು.

ಕೌಶಲ್ಯತೆಯಲ್ಲಿ ಇಡೀ ಪ್ರಪಂಚದಲ್ಲಿ ಭಾರತದ ಮಕ್ಕಳು ಬುದ್ಧಿವಂತರು ಎಂದು ಪ್ರೂವ್ ಮಾಡಿದ್ದಾರೆ. ಕೌಶಲ್ಯತೆ ವೃತ್ತಿ ಮಾಡುವವರು ವಿದೇಶದಲ್ಲಿ ಹೋಗಿ ತಮ್ಮ ಚಾಕಚಕ್ಯತೆ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಆರ್.ನಾಗಾನಂದ ಅವರು ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಎಲ್ಲಾ ಕಡೆ ಉತ್ತೇಜನೆ ಇದೆ. ಇತ್ತೀಚಿನ ದಿನಗಳಲ್ಲಿ ಇಸ್ರೋ ಉಡಾವಣೆಯಲ್ಲಿ ಕೈಗಾರಿಕಾ ತರಬೇತಿ ಪಡೆದವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಪಡೆದ 65 ಮಂದಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಎಸ್‌.ಬಿ. ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ. ಶಿವಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಂಚಮುಖಿ ನ್ಯೂಟ್ರಿಯೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಪುಟ್ಟರಾಜು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗ ಅಧಿಕಾರಿ ಸಿ.ಆರ್.ನಾಗರಾಜ್, ಮಾಂಡವ್ಯ ಎಕ್ಸಲೆನ್ಸ್ ಪಿ.ಯು.ಕಾಲೇಜು ಶೈಕ್ಷಣಿಕ ಪಾಲುದಾರರಾದ ಚೇತನ್ ಕೃಷ್ಣ, ಎಂ.ಆರ್.ಮಂಜು, ಪ್ರಾಂಶು ಪಾಲ ಹೆಚ್.ಎಂ.ಶ್ರೀನಿವಾಸ್, ಆಡಳಿತಾಧಿಕಾರಿ ತನ್ಮಯ್, ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಂ.ಸಿ. ಪ್ರವೀಣ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!