ವಿಶ್ವಶಾಂತಿಗಾಗಿ ಮೇಕೆದಾಟುವಿನಿಂದ ಮೈಸೂರು ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯು ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮಕ್ಕೆ ತಲುಪಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅದ್ದೂರಿ ಸ್ವಾಗತ.
ಸ್ವಾಗತ ಸ್ವೀಕರಿಸಿ ಮಾತನಾಡಿದ ಮೈಸೂರಿನ ಸಚ್ಚಿದಾನಂದ ದತ್ತಪೀಠದ ಕಿರಿಯ ಸ್ವಾಮೀಜಿ ವಿಜಯಾನಂದ ತೀರ್ಥ ಸ್ವಾಮೀಜಿ, ಗೋಸಂರಕ್ಷಣೆ, ಗೋವುಗಳಿಗೆ ಆಂಬುಲೆನ್ಸ್ ವಾಹನ, ಮಹಿಳೆಯರು, ಮಕ್ಕಳಿಗೆ ಸಹಾಯ, ರೈತರಿಗೆ ಪ್ರೋತ್ಸಾಹ, ವೇದ ಪಾಠಗಳಿಗೆ ಸಹಾಯ ಮಾಡಲು ಹಾಗೂ ಗಿಡನೆಟ್ಟು ಮರ ಮಾಡುವ ಸಂಕಲ್ಪ ಕಾರ್ಯಕ್ರಮಕ್ಕೆ ಐದು ಅಂಶಗಳನ್ನಿಟ್ಟುಕೊಂಡು ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸ್ವಾಮೀಜಿ ಅವರ ಜನ್ಮಸ್ಥಳವಾದ ಮೇಕೆದಾಟುವಿನಿಂದ ಕಾವೇರಿ ಜಲವನ್ನು ಪಾದಯಾತ್ರೆ ಮೂಲಕ ಮೈಸೂರಿಗೆ ತೆಗದುಕೊಂಡು ಬಂದು ಸ್ವಾಮೀಜಿ ಅವರ ಪಾದಾಭಿಷೇಕ ಮಾಡಬೇಕೆಂದು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮೇಕೆದಾಟುವಿನಿಂದ ಮಳವಳ್ಳಿಯವರೆಗೂ ರೈತರು, ಸಾರ್ವಜನಿಕರು ಆಗಮಿಸಿ ತಮ್ಮಲ್ಲಿರುವ ಹೂವು-ಹಣ್ಣುಗಳನ್ನು ನೀಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ನೈಸರ್ಗಿಕ ಸೌಂದರ್ಯವನ್ನು ಕಣ್ಮುಂದೆ ಬರಲು ಪಾದಯಾತ್ರೆ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಮೇರಿಕಾ, ಮಲೇಶಿಯಾ ಸೇರಿದಂತೆ ಇತರ ಕಡೆಗಳಿಂದ ಸುಮಾರು 120 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶರ್ಮ, ಪ್ರಶಾಂತ್ ಶರ್ಮ, ವಿನಯ್‌ಬಾಬು, ಡಾ, ಗಣೇಶ್ ಅಂಬಿಕಾ ಕಲ್ಯಾಣ ಸೇರಿದಂತೆ ಇತರರು ಪಾದಯಾತ್ರೆಯಲ್ಲಿದ್ದರು.
ಇದನ್ನು ಓದಿ: ಮಳವಳ್ಳಿ ಪುರಸಭೆಗೆ ನೂತನ ಉಪಾಧ್ಯಕ್ಷ