Thursday, October 24, 2024

ಪ್ರಾಯೋಗಿಕ ಆವೃತ್ತಿ

ರೈತರಿಗಾಗಿ ರೈತ ಉತ್ಪಾದಕ ಕಂಪನಿ ಆರಂಭ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ , ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕೆಂಬ ಉದ್ದೇಶದಿಂದ
ಸರ್ಕಾರದೊಂದಿಗೆ ರೈತ ಉತ್ಪಾದಕ ಕಂಪನಿ ಆರಂಭಿಸಲು, ಮತ್ತು ರೈತರು ಇದರ ಪ್ರಯೋಜನ ಪಡೆದುಕೊಳ್ಳಲು ರೈತ ಉತ್ಪಾದಕ ಕಂಪನಿಯನ್ನು ಆರಂಭಿಸಬೇಕು ಎಂದು ಪಶುಪಾಲನಾ ಉಪ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಕೊಳ್ಳೇಗಾಲ ರಸ್ತೆಯ ನಂಜುಂಡೇಶ್ವರ ಕಾಂಪ್ಲೆಕ್ಸ್ ನಲ್ಲಿ ಬಂಡ ಕುರಿ ಮತ್ತು ಮೇಕೆ ಉತ್ಪಾದಕರ ಕಂಪನಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ರೈತರು ಖರೀದಿಸುವ ವಸ್ತುಗಳಿಗೆ ಹೆಚ್ಚಿನ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ರೈತರಿಗೆ ಒಂದುಗೂಡಿಸಿ ರೈತ ಕಂಪನಿಗಳನ್ನು ಸ್ಥಾಪಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಕೃಷಿ, ಪಶುಪಾಲನೆ, ಸೇರಿದಂತೆ ಎಲ್ಲೆಲ್ಲಿಯೂ ಹೆಚ್ಚಾಗಿ ಜನರು, ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗದೆ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಂಪನಿಗಳನ್ನು ಆರಂಭಿಸಿ ಉತ್ಪಾದಕರಿಗೆ ಹೆಚ್ಚಿನ ಲಾಭ ಮತ್ತು ರೈತರಿಗೆ ಉಪಯೋಗವಾಗುವಂತಹ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಮಂಡ್ಯ ರೈತ ಉತ್ಪಾದಕರ ಕಂಪನಿಗಳಿಗೆ ಸುಮಾರು 30 ಲಕ್ಷ ಸಹಾಯ ಧನವನ್ನು ನೀಡಲಾಗುತ್ತಿದೆ,ಲ. ಪ್ರಾರಂಭದ ದಿನಗಳಲ್ಲಿ ಕಂಪನಿಯ ನಿರ್ವಹಣೆಗೆ ಸರ್ಕಾರದಿಂದಲೇ ಸಹಾಯಧನಕ್ಕಾಗಿ, ರೈತರಿಗೆ ರೈತ ಕಂಪನಿಯ ಪ್ರಯೋಜನಕ್ಕಾಗಿ ಆರ್ಥಿಕವಾಗಿ ಉತ್ತಮವಾದ ಸಲಹೆಯನ್ನು ನೀಡಿ.

ಬಂಡೂರು ಕುರಿ ವಿಶ್ವದಲ್ಲಿಯೇ ಶ್ರೇಷ್ಟತೆಯನ್ನು ಹೊಂದಿದೆ. ಬಂಡೂರಿ ಕುರಿ ಹೆಸರಿನಲ್ಲಿ ಆರಂಭಿಸುತ್ತಿರುವ ಕಂಪನಿ ಬೆಳೆಯಲಿ, ರೈತರಿಂದ ಷೇರು ಕಟ್ಟಿಸಿಕೊಂಡು ರೈತರು ಅಭಿವೃದ್ದಿಗೆ ಶ್ರಮಿಸಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯ ನಿರ್ದೇಶಕ ಡಾ. ವಿವೇಕಾನಂದ ಮಾತನಾಡಿ, ಪ್ರಧಾನ ಮಂತ್ರಿಯವರ ಮೂಲ ಉದ್ದೇಶ 2025ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು.

ಉತ್ಪಾದನೆಯಲ್ಲಿ ಹೆಚ್ಚಿನ ಆದಾಯ ಬರುವ ರೀತಿಯಲ್ಲಿ 10 ಸಾವಿರ ರೈತ ಉತ್ಪಾದಕ ಕಂಪನಿಗಳನ್ನು ಆರಂಭಿಸಬೇಕೆಂಬುದು ಪ್ರಧಾನಿ ಮಂತ್ರಿ ಅವರ ಚಿಂತನೆ ರೈತರದ್ದಾಗಿದೆ. ಅದರಂತೆ ಕರ್ನಾಟಕದಲ್ಲಿ 3ಸಾವಿರಕ್ಕೂ ಹೆಚ್ಚು ರೈತ ಕಂಪನಿಗಳು ಸ್ಥಾಪನೆಯಾಗಿದೆ ಎಂದು ಹೇಳಿದರು.

ಮಳವಳ್ಳಿಯಲ್ಲಿ ಮೊದಲ ಬಾರಿಗೆ ಬಂಡೂರು ಕುರಿ ಮತ್ತು ಮೇಕೆ ಉತ್ಪಾದಕರ ಕಂಪನಿಯನ್ನು ಸ್ಥಾಪಿಸಲಾಗಿದೆ, ಒಂದು ಸಾವಿರ ಷೇರುದಾರರನ್ನು ಸೇರಿಸುವ ಗುರಿಯನ್ನು ಹೊಂದಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ತ್ರಿನೇಶ್, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂಪಿ ಉದಯ್‌ಶಂಕರ್, ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರ ಮಹಾಮಂಡಲ ನಿರ್ದೇಶಕ ಪುಟ್ಟಸ್ವಾಮಿ, ನಿರ್ದೇಶಕಿ ಜಯಮ್ಮ, ಸಿಇಓ ನಿಸರ್ಗ, ಸಾಲುಮರದ ನಾಗರಾಜು, ನಿರ್ದೇಶಕ ವಕ್ಕರಹಳ್ಳಿ ದೇವರಾಜು, ಅನಿಲ್ ಸೇರಿದಂತೆ ಇತರರು ಇದ್ದರು.

ಇದನ್ನು ಓದಿ: ವಿಶ್ವಶಾಂತಿಗಾಗಿ ಮೇಕೆದಾಟು-ಮೈಸೂರು ಪಾದಯಾತ್ರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!