ಮಂಡ್ಯ ಜಿಲ್ಲಾ ಕೃಷಿ ಉತ್ಪನ್ನ ಮಾರಾಟ ಒಕ್ಕೂಟದ ನೂತನ ಅಧ್ಯಕ್ಷರಾಗಿ ನಾಗಮಂಗಲದ ಬಿ.ರಾಜೇಗೌಡ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ರಾಜೇಗೌಡ ಬಸವ ಜಯಂತಿ ಆಚರಿಸಲು ಮಂಡ್ಯ ನಗರಕ್ಕೆ ಆಗಮಿಸಿದ್ದ ಮಾಜಿ ಸಚಿವ ಎನ್. ಚಲುವರಾಯ ಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಪ್ರತಿಯಾಗಿ ಚಲುವರಾಯ ಸ್ವಾಮಿ ಕೂಡ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಗೌಡರನ್ನು ಅಭಿನಂದಿಸಿದರು. ಆಡಳಿತ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯ ಜಿಲ್ಲಾ ಕೃಷಿ ಉತ್ಪನ್ನ ಮಾರಾಟ ಒಕ್ಕೂಟವನ್ನು ಅಭಿವೃದ್ಧಿಪಡಿಸಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಧು ಜಿ.ಮಾದೇಗೌಡ, ಗಣಿಗ ರವಿ ಕುಮಾರ್, ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು ಮುಖಂಡರಾದ ಡಾ.ಕೃಷ್ಣ,ಮಂಡ್ಯ ಜಿಲ್ಲಾ ಕೃಷಿ ಉತ್ಪನ್ನ ಮಾರಾಟ ಒಕ್ಕೂಟದ ನಿರ್ದೇಶಕರಾದ ಬಸವರಾಜು,ಪುಟ್ಟಸ್ವಾಮಿ, ಚೌಡಪ್ಪ ,ರಘುನಂದನ್, ಲಿಂಗೇಗೌಡ ,ಶಶಿಧರ್, ಮದ್ದೂರು ಹರೀಶ್, ಮಹಾದೇವ ,ಮಂಜುನಾಥ ತಮ್ಮೇಗೌಡ,ಶಂಕರ ಲಿಂಗೇಗೌಡ ಸೇರಿದಂತೆ ಹಲವರಿದ್ದರು.