Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಸರ್ಕಾರ ವಿಫಲ : ರಮೇಶ್‌ಗೌಡ

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವುದು ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಲು ಕಾರಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಮಂಡ್ಯ ಉಸ್ತುವಾರಿ ಜಿ.ಎಂ.ರಮೇಶ್‌ಗೌಡ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಿಗಳು, ನೌಕರರು ಸರ್ಕಾರದ ಹಿಡಿತಕ್ಕೆ ಸಿಗದೆ, ಮುಖ್ಯಮಂತ್ರಿಗಳ ಆದೇಶವಿದ್ದರೂ ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿಗೆ ಯಾವುದೇ ಕಡಿವಾಣ ಹಾಕಲು ಸಾಧ್ಯವಾಗದಂತಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಸಂಬಂಧ ರಾಜ್ಯಾದ್ಯಂತ ಲಕ್ಷಾಂತರ ದೂರುಗಳು ಬಂದರೂ ಯಾವುದೇ ಕ್ರಮವಾಗಿಲ್ಲ, ಸರ್ಕಾರ ಅಧಿಕಾರ ಹಂಚಿಕೆಯ ಬಗ್ಗೆ, ಗ್ಯಾರೆಂಟಿ ಯೋಜನೆಗಳ ನೆಪವೊಡ್ಡಿ ಮಧ್ಯಮ ವರ್ಗದ ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲದಂತಾಗಿದ್ದು, ಅವರ ಜೀವನ ಜರ್ಜರಿತವಾಗಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಅಧೋಗತಿಗೆ ತಲುಪಿದ್ದು, ಶಿಕ್ಷಣ ಖಾಸಗಿಯವರ ಸಾಲದ ಶೂಲಕ್ಕೆ ಸಿಲುಕಿ, ದುಡಿಮೆಯ ಬಹುಪಾಲನ್ನು ಬಡ್ಡಿ ಕಟ್ಟುವಲ್ಲಿಯೇ ಕಳೆಯುವಂತಾಗಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಮಲ್ಲೇಶ, ಶಶಿಧರ ವೈ.ಕೆ. ಮಂಜುನಾಥ್, ಜಯರಾಂ ಸಿ.ಕೆ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ