Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರೈತರಿಂದ ಖರೀದಿಸುವ ಹಾಲಿನ ದರ ₹1.50 ಇಳಿಕೆ

ಮಂಡ್ಯ ಜಿಲ್ಲೆಯ ಹೈನುಗಾರಿಕೆಯ ಜೀವನಾಡಿ ಮನ್’ಮುಲ್ ಹಾಲು ಉತ್ಪಾದಕರು ಹಾಗೂ ಸಂಘದಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು ₹1.50 ಇಳಿಕೆ ಮಾಡಿ ಡಿ.1ರಿಂದಲೇ ಜಾರಿಗೊಳಿಸಿದೆ‌.

ಈ ಕುರಿತು ಮಾಹಿತಿ ನೀಡಿರುವ ಮನ್’ಮುಲ್ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ಒಕ್ಕೂಟದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದೆ.

ಹಾಲಿನ ಗುಣಮಟ್ಟ ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶದ ಹೊಂದಿರುವ ಸಂಘದಿಂದ ಖರೀದಿಸುವ ಪ್ರತಿ ಲೀ. ಹಾಲಿಗೆ ₹ 34.40 ಬದಲು ₹ 32.90 ಹಾಗೂ ಉತ್ಪಾದಕರಿಗೆ ನೀಡುತ್ತಿದ್ದ ₹ 33.50ರ ಬದಲು ₹ 32 ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಮನ್’ಮುಲ್ ಅಡಿಯಲ್ಲಿ 1,293 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅವುಗಳಿಂದ ಪ್ರತಿನಿತ್ಯ ಸರಾಸರಿ 9,61,852 ಕೆಜಿ ಹಾಲು ಸಂಗ್ರಹಿಸಲಾಗುತ್ತಿದೆ. ಅದರಲ್ಲಿ 3,70,579 ಲೀ ಸ್ಯಾಚೆಟ್ ಹಾಲು, 75,599 ಕೆಜಿ ಮೊಸರು, 57,065 ಲೀ. ಯುಎಚ್’ಟಿ ಹಾಲು ತಯಾರಿಸಿ ಉಳಿಕೆ ಹಾಲಿನಲ್ಲಿ 1,83,203 ಹಾಲನ್ನು ಅಂತರ ಡೇರಿ ಮತ್ತು ಅಂತರಾಜ್ಯಗಳಿಗೆ ಮಾರಾಟ ಮಾಡಿ ಸರಾಸರಿ 2,75,406 ಲೀ‌ ಹೆಚ್ಚುವರಿ ಹಾಲನ್ನು ಹಾಲಿನ‌ಪುಡಿ ಮಾಡಲಾಗುತ್ತಿದೆ. ಸದ್ಯ 879 ಮೆಟ್ರಿಕ್ ಟನ್ ಬೆಣ್ಣೆ ಮತ್ತು 3,229.50 ಟನ್ ಹಾಲಿನ ಪುಡಿ ದಾಸ್ತಾನು ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!