Saturday, May 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಮಿನಿ ಟೆಂಪೋ ಪಲ್ಟಿ: ರಸ್ತೆಯಲ್ಲಿ ಚೆಲ್ಲಾಡಿದ ಡ್ರೈಫ್ರೂಟ್ಸ್

ಟೈರ್ ಸಿಡಿದ ಪರಿಣಾಮ ಮಿನಿ ಟೆಂಪೋ ಪಲ್ಟಿಯಾಗಿ ಅದರಲ್ಲಿದ್ದ ಡ್ರೈ ಫ್ರೂಟ್ಸ್ ರಸ್ತೆಗೆ ಚೆಲ್ಲಾಡಿದ ಘಟನೆ ಇಂದು ಬೆಳಿಗ್ಗೆ ಹನ್ನೆರಡು ಗಂಟೆ ಸುಮಾರಿಗೆ ಮದ್ದೂರಿನ ಐಶ್ವರ್ಯ ಇಂಟರ್ ನ್ಯಾಷನಲ್ ಸ್ಕೂಲ್ ಮುಂಭಾಗ ನಡೆದಿದೆ.

ಜಾಹೀರಾತು

ಕೇರಳದಿಂದ ಡ್ರೈ ಫ್ರೂಟ್ಸ್ ಬಾಕ್ಸ್ ಗಳನ್ನು ತುಂಬಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ಮಿನಿ ಟೆಂಪೋದ ಹಿಂಬದಿ ಟೈಯರ್ ಸಿಡಿದ ಕಾರಣ ಟೆಂಪೋ ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭದಲ್ಲಿ ಟೆಂಪೋದಲ್ಲಿದ್ದ ಡ್ರೈ ಫ್ರೂಟ್ಸ್ ಬಾಕ್ಸ್ ಗಳು ರಸ್ತೆಗೆ ಬಿದ್ದಿವೆ. ಅದೃಷ್ಟವಶಾತ್ ಟೆಂಪೋದಲ್ಲಿದ್ದ ಮೂವರು ಯಾವುದೇ ಗಾಯಗಳಾಗದೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಮದ್ದೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಬ್ಯಾರಿಕೇಡ್ ಅಳವಡಿಸಿ,ರಸ್ತೆಯಲ್ಲಿ ಬಿದ್ದಿದ್ದ ಡ್ರೈ ಪ್ರೂಟ್ ಬಾಕ್ಸ್ ಗಳನ್ನು ತೆರವುಗೊಳಿಸಿ ಸಂಚಾರ ಸುಗಮ ಗೊಳಿಸಲು ಪ್ರಯತ್ನಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!