ವಿದ್ಯಾದಾನದ ಸಂದರ್ಭದಲ್ಲಿ ಶಿಕ್ಷಕರು ಯಾವುದೇ ಲೋಪ ವ್ಯಸಗಬಾರದು, ನಿಮ್ಮ ಕೈಯಲ್ಲಿ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುವಂತಹ ಶಕ್ತಿ ನಿಮ್ಮಲ್ಲಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಮಧುಗಿರಿ ಪಟ್ಟಣದ ಎಂ ಜಿ ಎಂ ಬಾಲಿಕಾ ಫ್ರೌಡಶಾಲೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 82 ಶಾಲೆಗಳ ಮುಖ್ಯೋಪಾಧ್ಯರಿಗೆ ಸನ್ಮಾನ ಮತ್ತು ₹25 ಸಾವಿರ ನಗದಿನ ಚೆಕ್ ವಿತರಣೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ಜವಾಬ್ದಾರಿ ಹೆಚ್ಚು ಇದೆ, ವಿದ್ಯಾರ್ಥಿಗಳನ್ನು ತಿದ್ದುವುದು, ಹಿಂದಿನ ತರಗತಿಗಳ ವಿಷಯಗಳ ಬಗ್ಗೆ ಚರ್ಚೆ ಮತ್ತು ಮೆಲುಕು ಹಾಕುವಂತೆ ಮಾಡಿ, ಏಕಾಗ್ರತೆ ರೂಢಿಸುವುದರ ಜತೆಯಲ್ಲಿ ಹೆಚ್ಚು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ನೀರೀಕ್ಷಿಸಬಹುದಾಗಿದೆ. ಮಕ್ಕಳು ಶಾಲೆಗಳಿಗೆ ಗೈರು ಹಾಜರಾಗದಂತೆ ಶಿಕ್ಷಕರು ಕ್ರಮ ವಹಿಸಬೇಕು, ಸಾಮಾಜಿಕ ತೊಂದರೆಗಳನ್ನು ಬಗೆಹರಿಸಲು ಮುಂದಾಗ ಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಅವಧಿಯಲ್ಲಿ ಶೂ ಭಾಗ್ಯ ಘೋಷಣೆ ಮಾಡಿ, ಶಿಕ್ಷಣಕ್ಕೆ ಸಹಕಾರ ನೀಡಿದ್ದರು,
ನಾನು ಶಾಸಕನಾಗಿದ್ದಾಗ ಕ್ಷೇತ್ರದ 3,250 ವಿದ್ಯಾರ್ಥಿಗಳ ಮನೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಹಾಗೂ ಗ್ರಾ.ಪಂ ವ್ಯಾಪ್ತಿಯ ಶಾಲೆಯ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಿದ್ದು ಹೆಮ್ಮೆಯ ವಿಷಯ ಎಂದು ಸಚಿವರ ಕೆ.ಎನ್ ರಾಜಣ್ಣ ಹೇಳಿದರು.
ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ. ವಿದ್ಯೆಯು ಸಾಧಕನಿಗೆ ಒಲಿಯುತ್ತದೆಯೇ ಹೊರತು ಸೋಮಾರಿಗೆ ಒಲಿಯುವುದಿಲ್ಲ, ಶಿಕ್ಷಕರು ತಮ್ಮ ಆಸಕ್ತಿಯನ್ನು ಎಲ್ಲಾರಿಗೂ ಹಂಚಿಕೆಯಾಗುವಂತೆ ನೋಡಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಶಾಲೆ ಬಿಟ್ಟ ಮಕ್ಕಳ ಬಗ್ಗೆ ವಿಶೇಷವಾಗಿ ಗಮನಹರಿಸಿ, ಅತಂಹ ಮಕ್ಕಳನ್ನು ಪತ್ತೆ ಹಚ್ಚಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು. ಇಂದು ಬೇಸಾಯ ಲಾಭಾದಾಯಕವಾಗಿಲ್ಲ, ಆದರೆ ವಿದ್ಯೆಗೆ ಮಾತ್ರ ಲಾಭದಾಯಕದತ್ತಾ ಕರೆದುಕೊಂಡು ಹೋಗುವಂತಹ ಶಕ್ತಿ ಇದೆ. ಗುರಿಯಿಂದ ಮಾತ್ರ ಸಾಧನೆಗಳನ್ನು ಮಾಡಲು ಸಾಧ್ಯ ಎಂದರು.
ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎನ್. ಮಹಾಲಿಂಗೇಶ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಗಳಿಗೆ ವೈಜ್ಷಾನಿಕ , ವೈಚಾರಿಕ ಮನೋಭಾವಗಳನ್ನು ಬೆಳೆಸಬೇಕು. ಮೌಢ್ಯತೆಯ ಬಗ್ಗೆ ಅರಿವು ಮೂಡಿಸುವಂತಾಗಬೇಕು , ಎಲ್ಲಾ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯ ಸರಕಾರ ಗಮನಹರಿಸಬೇಕು, ಪದವಿ ಕಾಲೇಜುಗಳಲ್ಲಿನ ಗ್ರಂಥಾಲಯಗಳಲ್ಲಿ ಕುವೆಂಪು ಮತ್ತು ಪೂರ್ಣ ಚಂದ್ರ ತೇಜಸ್ವಿಯವರ ಪುಸ್ತಕಗಳು ದೊರೆಯುವಂತಾಗಬೇಕು ಎಂದರು.
ಡಿಡಿಪಿಐ ಎಂ.ಆರ್ ಮಂಜುನಾಥ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಂಜಯ್, ಇಓ ಶಾಂತಲಾ , ವಿಷಯ ಪರೀವೀಕ್ಷರಾದ ಮೋಹನ್, ಎಪಿಸಿ ಮಾರುತಿ , ಡಿವೈಪಿಸಿ ನರಸಿಂಹಮೂರ್ತಿ , ಡಯಟ್ ಪ್ರಾಂಶುಪಾಲ ಗಂಗಾಧರ್, ಮಧುಗಿರಿ ಬಿಇಓ ತಿಮ್ಮರಾಜು, ಸಿರಾ ಬಿಇಒ ಕೃಷ್ಣ ಪ್ಪ , ಕೊರಟಗೆರೆ ಬಿಇಓ ನಟರಾಜು, ಚಿತ್ತಯ್ಯ , ರಂಗಾಧರಯ್ಯ , ಎಲ್ ಟಿ ದಾಸಣ್ಣ , ತೋಟದಪ್ಪ , ಕೆ.ಟಿ.ಸಿದ್ದೇಶ್ವರ್, ಕೆಪಿಸಿಸಿ ವಕ್ತಾರ ನಿಖಿತ್ ಮೌರ್ಯ, ಎನ್.ಗಂಗಣ್ಣ ಎಂ.ಎಸ್.ಶಂಕರನಾರಾಯಣ್, ಸಾಧಿಕ್ ಹಾಗೂ ಮತ್ತಿತರರು ಇದ್ದರು.




