ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಗೌಡ ಗಣಿಗ ಅವರು ಇಂದು ಮಂಡ್ಯ ನಗರಸಭಾ ವ್ಯಾಪ್ತಿಯ ಕಲ್ಲಹಳ್ಳಿ ಯ 7ನೇ ವಾರ್ಡ್ ನಲ್ಲಿ 25ಲಕ್ಷ ದ ರಸ್ತೆ ಅಭಿವೃದ್ಧಿಗೆ, ಹೊಸಹಳ್ಳಿಯ 16ನೇ ವಾರ್ಡ್ ನಲ್ಲಿ 25ಲಕ್ಷ ದ ರಸ್ತೆ ಅಭಿವೃದ್ಧಿಗೆ, ಹೌಸಿಂಗ್ ಬೋರ್ಡ್ 17ನೇ ವಾರ್ಡ್ ನ ಪರಿಶಿಷ್ಟ ಜಾತಿ ಕಾಲೋನಿ ಯಲ್ಲಿ 25 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಗಾಂಧೀನಗರ 18ನೇ ವಾರ್ಡ್ ನ ಪರಿಶಿಷ್ಟ ಜಾತಿ ಕಾಲೋನಿ ಯಲ್ಲಿ 25ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮಂಡ್ಯ ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡಕೊತ್ತಗೆರೆ ಗ್ರಾಮದಲ್ಲಿ ಅಂದಾಜು 25 ಲಕ್ಷ ರೂಗಳಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ದೊಡ್ಡಗರುಡನ ಹಳ್ಳಿ ಪಂಚಾಯತ್ ವ್ಯಾಪ್ತಿಯ ಚಾಕನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 25 ಲಕ್ಷ್ಮ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಬಾಳೆನಹಳ್ಳಿ ಗ್ರಾಮದಿಂದ ಮಾಚಗೌಡನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಗೆ 4 ಕೋಟಿ 55 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರ ಆವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ದೀನ ದಲಿತರ ಹಾಗೂ ಬಡವರ ಮತ್ತು ರೈತರು ಜನಸಾಮಾನ್ಯರ ಪರವಾದ ಸರ್ಕಾರ ಅದಕ್ಕೆ ಸಾಕ್ಷಿ ನಾನು ಪ್ರತಿನಿತ್ಯವೂ ನಮ್ಮ ಕ್ಷೇತ್ರದ ಸರ್ವೋತ್ತೋಮುಖ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ಮಾಡುತ್ತಿರುವುದು ನಿಮ್ಮ ಕಣ್ಣು ಮುಂದೆ ಇದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಇನ್ನು ಮುಂದೆ ಕೂಡ ಇದೇ ರೀತಿ ಅಭಿವೃದ್ಧಿ ಕಾರ್ಯಗಳು ನಮ್ಮ ಕ್ಷೇತ್ರ ಸೇರಿದಂತೆ ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ಬೇಸಾಯಕ್ಕೆ ಅನುಕೂಲ ಹಾಗೂ ರೀತಿಯಲ್ಲಿ ಸಮರ್ಪಕ ನೀರು ನಿರ್ವಹಣೆಗಾಗಿ ಕಾಲುವೆಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆಯನ್ನು ನೀಡುತ್ತೇನೆ, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದ ಸಂದರ್ಭದಲ್ಲಿ ಬರದಿಂದ ಕೂಡಿತ್ತು, ಜನಸಾಮಾನ್ಯರು ಬದುಕುವುದು ಕಷ್ಟ ಎಂದು ಟೀಕೆ ಮಾಡುವವರಿಗೆ ಪ್ರಕೃತಿಯೇ ಉತ್ತರ ನೀಡುತ್ತಿದೆ, ರಾಜ್ಯದ ಹೆಲ್ಲಡೆ ಉತ್ತಮ ಮಳೆಯಾಗುತ್ತಿದ್ದು ಕೆ ಆರ್ ಎಸ್ ಅಣೆಕಟ್ಟೆಯಲ್ಲಿ 95 ಅಡಿಯಷ್ಟು ನೀರು ಸಂಗ್ರಹವಾಗಿದೆ ಎಂದರು.
ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ, ನೀವೆಲ್ಲರೂ ಕೂಡ ಅವರಿಗೆ ಆಶೀರ್ವದಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಸದಸ್ಯರಾದ ಹೆಚ್ಎಸ್.ಮಂಜು, ಶಿವಲಿಂಗು, ಶ್ರೀಧರ್, ರವಿಕುಮಾರ್, ಮಾಜಿ ಸದಸ್ಯ ಕೆ.ಸಿ.ರವೀಂದ್ರ, ಪತ್ರಕರ್ತರಾದ ಕೆರಗೋಡು ಸೋಮಶೇಖರ್, ಬಿ.ಪಿ.ಪ್ರಕಾಶ್, ಮುಖಂಡರಾದ ಕಲ್ಲಹಳ್ಳಿ ಆನಂದ್, ಕಾರ್ತಿಕ್, ಕವಯತ್ರಿ ಶುಭಶ್ರೀ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




