Thursday, May 16, 2024

ಪ್ರಾಯೋಗಿಕ ಆವೃತ್ತಿ

ಕನಗನಮರಡಿಯಲ್ಲಿ ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತದ ಕುಮ್ಮಕ್ಕು : ದರ್ಶನ್ ಪುಟ್ಟಣ್ಣಯ್ಯ

ಪಾಂಡವಪುರ ತಾಲ್ಲೂಕಿನನಲ್ಲಿ ಪಟ್ಟಭದ್ರರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಗೆ ಬಿಜೆಪಿ ರ‍್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತ ಕುಮ್ಮಕ್ಕು ನೀಡುತ್ತಿವೆ ಎಂದು ರ‍್ನಾಟಕ ರಾಜ್ಯ ರೈತಸಂಘದ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಗನಮರಡಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಕೆ.ಆರ್.ಎಸ್ ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಸ್ಪೋಟಕಗಳನ್ನು ಬಳಸಿ ಕ್ವಾರಿ ಚಟುವಟಿಕೆಗಳನ್ನು ಮಾಡದಂತೆ ಈ ಹಿಂದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ, ಈ ಆದೇಶವನ್ನು ಉಲ್ಲಂಘಿಸಿ ಕನಗನಮರಡಿಯ ಹೇಮಲತಾ ಬಸವರಾಜು ಹಾಗೂ ಅಶೋಕ್ ಪಾಟೀಲ್ ಎಂಬುವವರು ಅಕ್ರಮ ಗಣಿಗಾರಿಕೆ ನಡೆಸುತ್ತಿದೆ, ಈ ಬಗ್ಗೆ ಮಂಡ್ಯ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಜಿಲ್ಲಾಡಳಿವೇ ಈ ದಂಧೆಯಲ್ಲಿ ಭಾಗಿಯಾಗಿರಬಹುದು

ಕನಕನಮರಡಿಯಲ್ಲಿ ಒಟ್ಟು 500 ಕ್ಕೂ ಹೆಚ್ಚು ಮನೆಗಳಿವೆ, ಅಕ್ರಮ ಗಣಿಗಾರಿಕೆಯಿಂದಾಗಿ ರೈತರು ಬೆಳೆದ ಬೆಳೆಗಳು ಧೂಳುಮಯವಾಗಿವೆ, ಮನೆಗಳು ಬಿರುಕು ಬಿಟ್ಟಿವೆ, ಇಡೀ ಗ್ರಾಮವೇ ಧೂಳುಮಯವಾಗಿದೆ. ಇದರಿಂದಾಗಿ ಜನ ಜೀವನದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗಿವೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲವರು ಬಾರಿ ಹೋರಾಟ ಮಾಡಿದ್ದರೂ, ಪಟ್ಟಭದ್ರರು ಗಣಿಗಾರಿಕೆಯನ್ನು ನಿಲ್ಲಿಸಿಲ್ಲ, ಜಿಲ್ಲಾಡಳಿತ ಈ ಅಕ್ರಮ ಗಣಿ ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದೆ, ಇದನ್ನೆಲ್ಲ ಗಮನಿಸಿದಾಗ ಜಿಲ್ಲಾಡಳಿವೇ ಈ ದಂಧೆಯಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನಗಳು ಮೂಡುತ್ತವೆ ಎಂದು ವಿವರಿಸಿದರು.

ರೈತ ಹೋರಾಟಗಾರರ ಮೇಲೆ ಕೇಸ್ 

ಈ ಅಕ್ರಮ ಗಣಿಗಾರಿಕೆ ವಿರುದ್ದ ಧ್ವನಿ ಎತ್ತಿದವರನ್ನು ಧಮನಿಸುವ ಕೆಲಸ ನಡೆಯುತ್ತಿದೆ, ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟ ನಡೆಸಿದ 18 ಜನ ರೈತರ ಮೇಲೆ ಈಗಾಗಲೇ ಕೇಸುಗಳನ್ನು ದಾಖಲಿಸಲಾಗಿದೆ. ಅವರ ಬೇಲ್ ಪಡೆದು ಮತ್ತೇ ಹೋರಾಟದಲ್ಲಿ ತೊಡಗಿದ್ದಾರೆಂದು ವಿವರಿಸಿದ ಅವರು, ಅಕ್ರಮ ಗಣಿಗಾರಿಕೆ ನಿಲ್ಲಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ರೈತಸಂಘದ ಮುಖಂಡ ಸಭೆ ಕರೆದು ಉಗ್ರ ಹೋರಾಟದ ರೂಪುರೇಷೆಗನ್ನು ತಯಾರಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪಾಂಡವಪುರ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ರವಿಕುಮಾರ್, ಬಲರಾಂ, ವೆಂಕಟೇಶ್, ಚಿಕ್ಕಣ್ಣ ಹಾಗೂ ಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!