ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ 3 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ರವಿಕುಮಾರ್ಗೌಡ ಗಣಿಗ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ರಸ್ತೆಗಳು ಅಭಿವೃದ್ದಿ ಕಾಣದೆ ಬಿದ್ದಿವೆ, ನಾನು ಶಾಸಕನಾದ ಮೇಲೆ ಸಾಕಷ್ಟು ರಸ್ತೆಗಳು ಡಾಂಬರೀಕರಣ ಕಾಣುತ್ತಿವೆ, ಮಂಡ್ಯ ವಿಧಾನಸಭಾ ಕ್ಷೇತ್ರ ವಾಪ್ತಿಯ ಕೆರಗೋಡು ಹೋಬಳಿಯ ಚಿಕ್ಕ ಬಾಣಸವಾಡಿ ಮತ್ತು ಗುಡಿಗೇನಹಳ್ಳಿ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ತಂದು ಅಭಿವೃದ್ದಿ ಮಾಡಿತ್ತಿದ್ದೇವೆ ಎಂದರು.

ಹೊನ್ನಾಯ್ಕನಹಳ್ಳಿ ಗೇಟ್ನಿಂದ ದೊಡ್ಡಬಾಣಸವಾಡಿ ಗ್ರಾಮದವರಗೆ ರಸ್ತೆ ಅಭಿವೃದ್ದಿಯಾಗಲಿದೆ, ಇದಕ್ಕೆ 1.50 ಕೋಟಿ ರೂ. ಮೀಸಲಿಡಲಾಗಿದೆ. ಗುಡಿಗೇನಹಳ್ಳಿ ಗೇಟ್ನಿಂದ ಗ್ರಾಮದವರಗೆ 1.50ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಯೋಜನೆಗಳ ಬಳಸಿ ದೇವಾಲಯ, ರಸ್ತೆಗಳು, ನಾಲೆಗಳು, ಕೆರೆಕಟ್ಟೆಗಳನ್ನು ಜೀರ್ಣೋದ್ದಾರ ಮಾಡಲಾಗುವುದು ಎಂದು ಹೇಳಿದರು.




