Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉದಯ್ ಗುದ್ದಲಿಪೂಜೆ

ವರದಿ : ಪ್ರಭು ವಿ ಎಸ್

ಪ್ರಸಕ್ತ ಹಂಗಾಮಿನಲ್ಲಿ ಮದ್ದೂರು ಕೆರೆ ಅಚ್ಚುಕಟ್ಟು ಭಾಗದ ಕೆಮ್ಮಣ್ಣು ನಾಲಾ ವ್ಯಾಪ್ತಿಯ ರೈತರು ಭತ್ತ ಸೇರಿದಂತೆ ಇನ್ನಿತರೆ ಅಲ್ಪಾವಧಿ ಬೆಳೆಗಳನ್ನು ಹಾಕದಂತೆ ಈ ಹಿಂದೆಯೇ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆ ವೇಳೆ ತಿಳಿಸಿರುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.

ಮದ್ದೂತು ತಾಲೂಕಿನ ಸೋಮನಹಳ್ಳಿ ಗ್ರಾಮದ 40 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಉಪ್ಪಾರದೊಡ್ಡಿ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಮ್ಮಣ್ಣು ನಾಲಾ ಆಧುನೀಕರಣಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದ್ದು ಸರ್ವೆ ಕಾರ್ಯದ ಬಳಿಕ ಕಾಮಗಾರಿ ಆರಂಭಗೊಳ್ಳಲಿರುವುದಾಗಿ ಹೇಳಿದರು.

ರೈತರು ಕೆಮ್ಮಣ್ಣು ನಾಲಾ ಬಯಲು ಹೊರತುಪಡಿಸಿ ಮದ್ದೂರು ಪಟ್ಟಣದ ಖಾರಾಬಿ ಬಯಲು ಮತ್ತು ವೈದ್ಯನಾಥಪುರ ವ್ಯಾಪ್ತಿಯಲ್ಲಿ ನೀರುಣಿಸುವ ಬೈರನ್ ನಾಲಾ ಮತ್ತು ವೈದ್ಯನಾಥಪುರ ನಾಲೆಗಳಿಗೆ ಚನ್ನೇಗೌಡನದೊಡ್ಡಿ ಬಳಿಯ ಬೀಸುಕೋಡಿಯಿಂದ ನೀರು ಹರಿಸಲು ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು ತ್ವರಿತ ಗತಿಯ ಕೆಲಸದೊಟ್ಟಿಗೆ ಜೂನ್ ಮಾಸಾಂತ್ಯದೊಳಗೆ ಮುಕ್ತಾಯಗೊಳ್ಳಲಿದ್ದು ರೈತರ ಸಹಕಾರ ಅತಿ ಮುಖ್ಯವೆಂದರು.
ಮೇಲ್ಕAಡ ಕಾಮಗಾರಿ ವಿಚಾರದಲ್ಲಿ ಸಲ್ಲದ ಹೇಳಿಕೆಗಳು ಎಲ್ಲೆಡೆ ಕೇಳಿ ಬರುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ರೈತರು ಸೇರಿದಂತೆ ಸಾರ್ವಜನಿಕರು ಅಂತೆ ಕಂತೆಗಳಿಗೆ ಕಿವಿಗೊಡದಂತೆ ನಾಲಾ ಆಧುನೀಕರಣ ಮಾಡಿಯೇ ತೀರುವುದಾಗಿ ಹೇಳಿದರು.

ಫೆ. 24 ಸೋಮವಾರ ನೀರಾವರಿ ನಿಗಮದ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಉನ್ನತ ಅಧಿಕಾರಿಗಳೊಟ್ಟಿಗೆ ಇತರೆ ಅಧಿಕಾರಿಗಳ ಸಭೆ ಕರೆದಿದ್ದು ಕರಪತ್ರಗಳನ್ನು ಸಹ ಹೊರಡಿಸಿ ರೈತರ ಹಿತ ಕಾಯುವ ಸಂಬಂಧ ಶ್ರಮಿಸುವುದಾಗಿ ಹೇಳಿದರು.

ಈ ವೇಳೆ ಸೋಮನಹಳ್ಳಿ ವಿ.ಎಸ್.ಎಸ್.ಎನ್.ಬಿ. ಅಧ್ಯಕ್ಷ ಹಾಗೂ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಟಿ.ಶಂಕರ್, ಗ್ರಾ.ಪಂ. ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷೆ ಐಶ್ವರ್ಯ, ಸದಸ್ಯರಾದ ಪ್ರೀತಮ್, ಅಪೂರ್ವ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ