Friday, September 13, 2024

ಪ್ರಾಯೋಗಿಕ ಆವೃತ್ತಿ

ಎಂಎಲ್ ಸಿ ಕೆ.ಪಿ.ನಂಜುಂಡಿ ಸನ್ಮಾನಿಸಿದ ಶಾಸಕ ಸಿ.ಎಸ್.ಪುಟ್ಟರಾಜು

ಪಾಂಡವಪುರ ತಾಲೂಕಿನಾದ್ಯಂತ ವಿಶ್ವಕರ್ಮ ಜನಾಂಗದ ಸಭೆ ನಡೆಸುವ ಸಂಬಂಧ ಕ್ಷೇತ್ರಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರನ್ನು ಪ್ರವಾಸಿಮಂದಿರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಸನ್ಮಾನಿಸಿ, ಕೆಲಕಾಲ ಔಪಚಾರಿಕವಾಗಿ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ಪುಟ್ಟರಾಜು ಅವರು ಸಚಿವ ಸಂಪುಟ ರಚನೆಯಾದರೆ ತಮಗೂ ಸಚಿವ ಸ್ಥಾನ ಸಿಗಲಿ ಎಂದು ಶುಭ ಕೋರಿದರು.

ಅದ್ದೂರಿ ಸ್ವಾಗತ

ಇಂದು ಪಟ್ಟಣಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಮತ್ತು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರಿಗೆ ಪಟ್ಟಣದ ಡಾ. ರಾಜ್ ಕುಮಾರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ವಿಶ್ವಕರ್ಮ‌ಸಮಾಜದ‌ ಮುಖಂಡರು ಜೆಸಿಬಿ ಯಂತ್ರದ ಮೂಲಕ ಹೂಮಳೆ ಅರ್ಪಿಸಿ, ಬೃಹತ್ ಹೂವಿನ ಹಾರ ಹಾಕಿ, ಜೈಕಾರ ಕೂಗುತ್ತಾ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಮಹಾಸಭಾ ಪಾಂಡವಪುರ ತಾಲೂಕು ಅಧ್ಯಕ್ಷ ಸುಂಕಾತೊಣ್ಣೂರು ಹೇಮಂತ್ ಕುಮಾರ್, ಮಂಡ್ಯ ಜಿಲ್ಲಾಧ್ಯಕ್ಷ ತೈಲೂರಿ ಆನಂದಚಾರಿ, ಪಾಂಡವಪುರ ತಾಲೂಕು ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ, ಯುವ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ನಿಂಗರಾಜು ದೊಡ್ಡಬ್ಯಾಡರಹಳ್ಳಿ, ಪುಟ್ಟಾಚಾರಿ, ರಾಕೇಶ್, ಮೂರ್ತಾಚಾರಿ ಕ್ಯಾತನಹಳ್ಳಿ, ಉಮೇಶ್ ಬಿಂಡಹಳ್ಳಿ, ಕಾಂತರಾಜು ಮಾಡರಹಳ್ಳಿ, ಮಹದೇವು ಡಿಂಕಾಶೆಟ್ಟಹಳ್ಳಿ ಹಾಗೂ ಯುವ ಮುಖಂಡ ಗುರು ಸೇರಿದಂತೆ ಅನೇಕರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!