Friday, November 20, 2026

ಪ್ರಾಯೋಗಿಕ ಆವೃತ್ತಿ

ರೌಡಿ ಶೀಟರ್ ಪರ ಪ್ರಧಾನಿ ಮೋದಿ ಪ್ರಚಾರ | ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ ಎಂದ ಜೆಡಿಎಸ್

ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲಾ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿಗೆ ಸಲ್ಲಬೇಕು. ಬಡವರ ಅನ್ನವನ್ನು ಕದ್ದ, 40 ಪ್ರಕರಣಗಳಿರುವ ರೌಡಿಯ ಪರ ಪ್ರಚಾರ ಪ್ರಧಾನಿ ಮಾಡುವುದೆಂದರೆ ರಾಜ್ಯ ರಾಜಕೀಯದ ಇತಿಹಾಸದಲ್ಲೊಂದು ಕಪ್ಪುಚುಕ್ಕೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

“>

 

ರೌಡಿ ಶೀಟರ್, ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ವಿರುದ್ಧ ಮೋದಿ ಪ್ರಚಾರ ನಡೆಸಲಿದ್ದಾರೆಂದು ಬಿಜೆಪಿ ನಾಯಕರೇ ಹೇಳಿಕೊಂಡಿದ್ದಾರೆ. ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಜೈಲಲ್ಲಿ ಇರಬೇಕಿದ್ದ ಆರೋಪಿಯನ್ನು ವಿಧಾನಸೌಧಕ್ಕೆ ಕಳುಹಿಸಲು ಬಿಜೆಪಿ ಟಿಕೆಟ್ ನೀಡಿದ್ದೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ. ಬಿಜೆಪಿಯಲ್ಲಿ ಇರುವ ಎಲ್ಲಾ ನಾಯಕರು ಜನ ಕಂಟಕರು, ಇದೀಗ ಅವಕಾಶ ಕೊಟ್ಟ ಹೊಸ ಮುಖಗಳು ‘ನರಭಕ್ಷಕರು’. ಇಲ್ಲಿಗೆ, ‘ಉದಯವಾಯಿತು ಚೆಲುವ ಕನ್ನಡ ನಾಡು!’ ಎಂದು ವ್ಯಂಗ್ಯವಾಡಿದೆ.

ಬಹುಷಃ ನರೇಂದ್ರ ಮೋದಿ ಮತ್ತು ಅಮಿತ್ ಶಾ ಗೆ ತಮ್ಮ ಹಳೆಯ ‘ಗುಜರಾತ್’ ದಿನಗಳು ನೆನಪಾಗಿ ಕರ್ನಾಟಕದಲ್ಲೂ ಪ್ರಯೋಗಿಸಲು ಹವಣಿಸುತ್ತಿದ್ದಾರೆ. ರೌಡಿಗಳು ಮತ್ತು ಕ್ರಿಮಿನಲ್ ಗಳನ್ನು ಕನ್ನಡಿಗರು ಬೆಳೆಸುವುದಿಲ್ಲ ಎಂಬುವುದು ಈ ಚುನಾವಣೆಯಲ್ಲಿ ತಿಳಿಸಿಕೊಡಲಿದ್ದಾರೆ.  ಏನು ಮಾಡಿದರೂ ನಡೆಯುತ್ತದೆ ಎಂಬ ನಿಮ್ಮ ಅಹಂಕಾರವನ್ನು ಇಳಿಸಲಿದ್ದಾರೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ