ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಹಂಗಿಸಿದ್ದ ಬಿಜೆಪಿ ಛತ್ತೀಸ್ಗಡದಲ್ಲಿ “ಮೋದಿ ಕಿ ಗ್ಯಾರಂಟಿ” ಎಂದು ಕಾಂಗ್ರೆಸ್ಸನ್ನು ನಕಲು ಮಾಡಲು ಹೊರಟಿದೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ವಿಶೇಷವೇನೆಂದರೆ ಇಷ್ಟು ದಿನ ಕಾಂಗ್ರೆಸ್ ಇಟ್ಟ ಹೆಸರುಗಳನ್ನು ಬದಲಿಸುತ್ತಿತ್ತು, ಈಗ ಕಾಂಗ್ರೆಸ್ ಇಟ್ಟ ಹೆಸರನ್ನೇ ಬಳಸುತ್ತಿದೆ! ಕಾಂಗ್ರೆಸ್ಸಿನ ಯೋಜನೆ, ಹೆಸರುಗಳನ್ನು ನಕಲು ಮಾಡುವ ಬಿಜೆಪಿ, ಯಾವ ನೈತಿಕತೆಯಿಂದ ಕಾಂಗ್ರೆಸ್ಸನ್ನು ಟೀಕಿಸುತ್ತದೆ?? ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.
ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಹಂಗಿಸಿದ್ದ ಬಿಜೆಪಿ ಛತ್ತೀಸ್ಗಡದಲ್ಲಿ “ಮೋದಿ ಕಿ ಗ್ಯಾರಂಟಿ” ಎಂದು ಕಾಂಗ್ರೆಸ್ಸನ್ನು ನಕಲು ಮಾಡಲು ಹೊರಟಿದೆ!
ವಿಶೇಷವೇನೆಂದರೆ ಇಷ್ಟು ದಿನ ಕಾಂಗ್ರೆಸ್ ಇಟ್ಟ ಹೆಸರುಗಳನ್ನು ಬದಲಿಸುತ್ತಿತ್ತು, ಈಗ ಕಾಂಗ್ರೆಸ್ ಇಟ್ಟ ಹೆಸರನ್ನೇ ಬಳಸುತ್ತಿದೆ!
ಕಾಂಗ್ರೆಸ್ಸಿನ ಯೋಜನೆ, ಹೆಸರುಗಳನ್ನು ನಕಲು…— Karnataka Congress (@INCKarnataka) November 7, 2023
“>
ಮೋದಿ ಕಿ ಗ್ಯಾರಂಟಿ ಎನ್ನುವ ಬದಲು “ಮೋದಿ ಕಿ ಜುಮ್ಲಾ” ಹೆಸರೇ ಸೂಕ್ತ ಅಲ್ಲವೇ ? ಪ್ರಧಾನಿಯಾಗಿ 2 ಅವಧಿ ಕಳೆದರೂ.. ಅಕೌಂಟಿಗೆ 15 ಲಕ್ಷ ಬರಲೇ ಇಲ್ಲ!, 20 ಲಕ್ಷ ಕೋಟಿ ಪ್ಯಾಕೇಜ್ ಕಾಣಲೇ ಇಲ್ಲ!,
युवा भाई मन बर मोदी के गारेंटी…#modi_ki_guarantee#BJP #bjpcg #BJP_Aawat_He #dharsiwa #anujsharmabjp #anujsharma #Election2023 pic.twitter.com/9D9wY3efs8
— Anuj Sharma (@anujsharmacg) November 6, 2023
“>
ವರ್ಷಕ್ಕೆ 2 ಕೋಟಿ ಉದ್ಯೋಗ ಸಿಗಲೇ ಇಲ್ಲ!, ಅಚ್ಚೆ ದಿನ್ ಕನಸು ನನಸಾಗಲಿಲ್ಲ! ಚೀನಾಕ್ಕೆ ಕೆಂಗಣ್ಣು ಬೀರಲಿಲ್ಲ!, ಸ್ಮಾರ್ಟ್ ಸಿಟಿ ಆಗಲಿಲ್ಲ !, 1 ಡಾಲರ್ ಗೆ 15 ರುಪಾಯಿ ಆಗಲಿಲ್ಲ! ಹಾಗೂ ಬೆಲೆ ಏರಿಕೆಗೆ ಕಡಿವಾಣ ಬೀಳಲೇ ಇಲ್ಲ! ಎಂದು ಬಿಜೆಪಿಗೆ ತಿರುಗೇಟು ನೀಡಿದೆ.




