ಇಂದು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಹೆಚ್ಎಎಲ್‌ನ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿ ನಗರಕ್ಕೆ ಆಗಮಿಸಿದ್ದರು.
ಪ್ರಧಾನಿ ಹೆಚ್ಎಎಲ್ ಭೇಟಿ ಬೆನ್ನಲ್ಲೇ ಸರಣಿಯಾಗಿ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಹಾಕಿರುವ ರಾಜ್ಯ ಕಾಂಗ್ರೆಸ್, ‘ಪ್ರಧಾನ ಮಂತ್ರಿಗಳೇ ನಮ್ಮ ಹೆಚ್‌ಎಎಲ್ ಅನ್ನು ಮಾರಬೇಡಿ’ ಎಂದು ಲೇವಡಿ ಮಾಡಿದೆ.
HAL ನಲ್ಲಿ ಫೋಟೋಶೂಟ್ ಮಾಡಿಸಿಕೊಂಡ @narendramodi ಅವರೇ,
ಇದೇ HAL ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ?
HAL ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?
— Karnataka Congress (@INCKarnataka) November 25, 2023
“>“ಹೆಚ್‌ಎಎಲ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ನರೇಂದ್ರ ಮೋದಿಯವರೇ, ಇದೇ ಹೆಚ್‌ಎಲ್‌ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ? ಹೆಚ್‌ಎಎಲ್‌ಗೆ ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?” ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪ್ರಶ್ನಿಸಿದೆ.
“ಮತ್ತೊಂದು ಪೋಸ್ಟ್‌ನಲ್ಲಿ, ಮಾರಾಟಗಾರ ನರೇಂದ್ರ ಮೋದಿಯವರೇ, ನಮ್ಮ ಹೆಮ್ಮೆಯ ಹೆಚ್ಎಎಲ್ ನ್ನು ಮಾರಬೇಡಿ. ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು ಹೆಚ್ಎಎಲ್‌ಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ ಹೆಚ್‌ಎಎಲ್ ನಮಗೆ ಬಿಡಿ” ಎಂದು ಕಾಂಗ್ರೆಸ್ ಕಾಳೆಲೆದಿದೆ.
ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಇಂದು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಸ್ವಾವಲಂಬನೆಯ ಕ್ಷೇತ್ರದಲ್ಲಿ ಜಗತ್ತಿನ ಯಾವ ದೇಶಕ್ಕಿಂತಲೂ ನಾವು ಕಡಿಮೆಯಿಲ್ಲ ಎಂದು ನಾನು ಅಪಾರ ಹೆಮ್ಮೆಯಿಂದ ಹೇಳಬಲ್ಲೆ. ಭಾರತೀಯ ವಾಯುಪಡೆ, ಡಿಆರ್‌ಡಿಒ, ಹೆಚ್‌ಎಎಲ್ ಮತ್ತು ಎಲ್ಲಾ ಭಾರತೀಯರಿಗೆ ಮನದಾಳದ ಅಭಿನಂದನೆಗಳು” ಎಂದಿದ್ದಾರೆ.