Friday, October 18, 2024

ಪ್ರಾಯೋಗಿಕ ಆವೃತ್ತಿ

RCB ಆಟಗಾರ ಮೊಹಮ್ಮದ್ ಸಿರಾಜ್ ಈಗ ತೆಲಂಗಾಣ ಡಿಸಿಪಿ

ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೀಡ್ ಸ್ಟಾರ್ ಮೊಹಮ್ಮದ್ ಸಿರಾಜ್ ಅವರು ತೆಲಂಗಾಣದ ಡಿಸಿಪಿ ಹುದ್ದೆಯನ್ನು ಶುಕ್ರವಾರ (ಅಕ್ಟೋಬರ್ 11) ಅಲಂಕರಿಸಿದ್ದಾರೆ‌. ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಜಿತೇಂದ್ರ ಅವರು ಸಿರಾಜ್ ಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಮೊಹಮ್ಮದ್ ಸಿರಾಜ್ ಅವರನ್ನು ಗೌರವಿಸುವ ಸಲುವಾಗಿ ಉನ್ನತ ದರ್ಜೆಯ ಸರ್ಕಾರಿ ಹುದ್ದೆ ಹಾಗೂ ನಿವೇಶನವನ್ನು ನೀಡುವುದಾಗಿ ಘೋಷಿಸಿದ್ದರು.

ನಿವೇಶನ ಪಡೆದ ಸಿರಾಜ್

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆದೇಶದಂತೆ ಈಗಾಗಲೇ ಸ್ಪೀಡ್ ಸ್ಟಾರ್ ಮೊಹಮ್ಮದ್ ಸಿರಾಜ್ ಗೆ ಜುಬಿಲಿ ಹಿಲ್ಸ್ ನ ನಂ.78 ರಲ್ಲಿ 600 ಸ್ಕ್ವೇರ್ ಯಾರ್ಡ್ ನ ಸೈಟ್ ಅನ್ನು ನೀಡಲಾಗಿದ್ದು, ನಿನ್ನೆ ಡಿಎಸ್ ಪಿ ಹುದ್ದೆಯನ್ನು ಮೊಹಮ್ಮದ್ ಸಿರಾಜ್ ಅಲಂಕರಿಸಿದ್ದಾರೆ.

ಡಿಎಸ್ ಪಿ ಹುದ್ದೆ ಅಲಂಕರಿಸಿದ್ದ ನಿಖಾತ್ ಝರೀನ್

ಕ್ರೀಡಾಲೋಕದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ ಬಾಕ್ಸರ್ ನಿಖಾತ್ ಝರೀನ್ ಅವರ ಸಾಧನೆ ಪರಿಗಣಿಸಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ನಿಖಿತ್ ಗೆ ನಿವೇಶನ ಹಾಗೂ ಡಿಎಸ್ ಪಿ ಹುದ್ದೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ತೆಲಂಗಾಣ ಸರ್ಕಾರವು ಸಾರ್ವಜನಿಕ ಸೇವೆಗಳಿಗೆ ನೇಮಕಾತಿಗಳ ನಿಯಂತ್ರಣ ಮತ್ತು ಸಿಬ್ಬಂದಿ -1994 ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. 2024ರ ಸೆಪ್ಟೆಂಬರ್ 18 ರಂದು ನಿಖಿತ್ ಡಿಎಸ್ ಪಿ ಹುದ್ದೆ ಅಲಂಕರಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!