Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ್ದು ಹೇಯ ಕೃತ್ಯ: ಖಂಡನೆ

ಕಳೆದ ಭಾನುವಾರ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲಗುಂಡಿಗೆ, ಶೌಚಗುಂಡಿಗೆ ಇಳಿಸಿದ ಘಟನೆ ಅತ್ಯಂತ ಹೇಯ ಹಾಗೂ ಅಮಾನುಷ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಖಂಡಿಸಿದ್ದಾರೆ.

ಈ ಘಟನೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಾರ‍್ಯಪ್ರವೃತ್ತರಾಗಿ, ಜನ ಸಾಮನ್ಯರ ಹಾಗೂ ಪೋಷಕರ ಆಕ್ರೋಶದ ಒತ್ತಾಯದ ಮೇರೆ ಗೆ,  ವಸತಿ ಶಾಲೆಯ ಪ್ರಾಂಶುಪಾಲೆ, ವಾರ್ಡನ್, ಅವರನ್ನು ಬಂಧಿಸಿ, ಅಮಾನತುಗೊಳಿಸಲಾಗಿದೆ.  ಈ ನಡುವೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಕೆಲವರು ತಲೆಮರೆಸಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಸಮಾಜ ತಲೆತಗ್ಗಿಸುವಂತಾಗಿದೆ, ಈ ರೀತಿಯ ಅಕ್ಷಮ್ಯ ಅಪರಾಧಗಳಿಗೆ ಕಾರಣಗಳನ್ನ ಮತ್ತು ಯಾವ ಕಾರಣಕ್ಕಾಗಿ ಈ ರೀತಿಯ ಗೇಯ ಕೃತ್ಯಗಳನ್ನ ಎಸಗಿದ್ದಾರೆ ಅನ್ನೋದನ್ನ ತಿಳಿಯಬೇಕಿದೆ ಎಂದು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಹಶಃ ಹದಗೆಟ್ಟಿ ನಿಂತ ಮಲಗುಂಡಿಯನ್ನು ಸರಿಪಡಿಸುವ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದರೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮಾಹಿತಿ ಕೊಟ್ಟು ಅಗತ್ಯ ಅನುಮೋದನೆಯನ್ನ ಪಡೆದು, ನಂತರದ ಹಂತದಲ್ಲಿ ಗ್ರಾಮ ಪಂಚಾಯತಿಯ ಪಿಡಿಓ ರವರ ಮೂಲಕ ಲಭ್ಯವಿರುವ ಸೌಲಭ್ಯಗಳನ್ನ ಬಳಸಿಕೊಂಡ ಅತ್ಯಂತ ಸರಳ ರೀತಿಯಲ್ಲಿ ಈ ಕೆಲಸವನ್ನ ಮಾಡಿ ಮುಗಿಸಬಹುದಾಗಿತ್ತು, ಅದು ಆ ರೀತಿ ಆಗದಿರುವುದನ್ನ ನೋಡಿದರೆ ಬಹುಶಃ ಇಲ್ಲಿನು ಕೂಡ ಭ್ರಷ್ಟಾಚಾರದಿಂದ ಕೂಡಿದ್ದು ಈ ಕೆಲಸಗಳಿಗೆ ನಿಗದಿಪಡಿಸಿರುವ ಹಣವನ್ನು ಲಪಟಾಯಿಸುವ ಸಂಚು ಇರಬೇಕು ಎಂದು ಅವರು ಆರೋಪಿಸಿದ್ದಾರೆ.

ವಸತಿ ಶಾಲೆಗಳಲ್ಲಿ ಅಂದರೆ ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ, ಮಹಾತ್ಮ ಗಾಂಧಿ, ಏಕಲವ್ಯ ಇನ್ನು ಹಲವು ವಸತಿ ಶಾಲೆಗಳಿಗೆ ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಕೊಡಮಾಡುವ ಅಗತ್ಯ ಮೂಲಭೂತ ಸೌರ‍್ಯಗಳನ್ನು ಒದಗಿಸುವ ಹಂತದಲ್ಲಿ ಕೂಡ ಭ್ರಷ್ಟಚಾರ ಹಾಸುಹೊಕ್ಕಾಗಿದೆ, ಎಲ್ಲಾ ಹಂತದ ಅಧಿಕಾರಿಗಳು ಶಾಮೀಲಾಗಿರುವ ಕಾರಣ ಇಂತಹ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ನರಳುಂತಾಗಿದೆ ಎಂದು ಅವರು ದೂರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!