Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿಲ್ಲದ ಇಸ್ರೇಲ್- ಹಮಸ್ ಸಂಘರ್ಷ: 3,600 ಕ್ಕೂ ಹೆಚ್ಚು ಮಂದಿ ಸಾವು

ಐದನೇ ದಿನಕ್ಕೆ ಕಾಲಿಟ್ಟ ಇಸ್ರೇಲ್- ಹಮಸ್ ಹೋರಾಟಗಾರರ ಸಂಘರ್ಷದಲ್ಲಿ ಎರಡೂ ಕಡೆಯ ಸೇನೆಯಿಂದ ಅಂದಾಜು 3,600 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಜಾಪಟ್ಟಿಯ ಹಮಸ್ ಹೋರಾಟಗಾರರು ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಇದುವರೆಗೆ ಇಸ್ರೇಲ್‌ನಲ್ಲಿ 1,200ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ ಎಂಬುದಾಗಿ ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ 900 ಮಂದಿ ಮೃತಪಟ್ಟರೆ, 4,600 ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಮೂಲಗಳ ಪ್ರಕಾರ, ಎರಡೂ ದೇಶದಲ್ಲಿ ಇದಕ್ಕಿಂತ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಜಾ ಪಟ್ಟಿಯಲ್ಲಿ ವಿದ್ಯುತ್, ಅನಿಲ, ಆಹಾರ ಹಾಗೂ ನೀರಿನ ಸಂಪರ್ಕವನ್ನು ಇಸ್ರೇಲ್ ಕಡಿತಗೊಳಿಸಿದೆ. ಇದರಿಂದಾಗಿ 2 ಲಕ್ಷಕ್ಕೂ ಹೆಚ್ಚು ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಯುದ್ಧದ ಸಮಯದಲ್ಲಿ ಇಸ್ರೇಲ್‌ ಅಸಹಾಯಕ ಸ್ಥಿತಿಗೆ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ಹಮಸ್‌ ದಾಳಿಗೆ ತತ್ತರಿಸಿರುವ ಯಹೂದಿ ರಾಷ್ಟ್ರವು ಈಗ ಲೆಬನಾನ್‌ ಹಾಗೂ ಸಿರಿಯಾ ದೇಶಗಳನ್ನು ಎದುರಿಸಬೇಕಿದೆ. ಈ ಎರಡೂ ದೇಶಗಳು ಉತ್ತರ ಇಸ್ರೇಲ್‌ನಲ್ಲಿ ಮಂಗಳವಾರ ಕ್ಷಿಪಣಿ ದಾಳಿ ನಡೆಸಿವೆ. ಇದು ಇಸ್ರೇಲ್‌ಅನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಇಸ್ರೇಲ್ ರಕ್ಷಣಾ ಪಡೆಗಳನ್ನು ಗುರಿಯಾಗಿಸಿ ಲೆಬನಾನ್‌ನ ಪಶ್ಚಿಮ ಗಲಿಲಿಯಲ್ಲಿ 15 ರಾಕೆಟ್‌ಗಳನ್ನು ಹಾರಿಸಲಾಗಿದೆ.

ಗೋಲನ್ ಹೈಟ್ಸ್‌ ಪ್ರದೇಶದಲ್ಲಿ ಸಿರಿಯಾದಿಂದ ಕೆಲ ರಾಕೆಟ್‌ಗಳನ್ನು ಹಾರಿಸಲಾಗಿದೆ. ಹಲವಾರು ಸ್ಪೋಟಕಗಳು ಇಸ್ರೇಲ್ ಭೂಪ್ರದೇಶವನ್ನು ದಾಟಿ ಬಯಲು ಪ್ರದೇಶಗಳಲ್ಲಿ ಬಿದ್ದಿವೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!