Thursday, November 19, 2026

ಪ್ರಾಯೋಗಿಕ ಆವೃತ್ತಿ

ತಾಯಿಯ ಸಂಸ್ಕಾರವೇ ಮಕ್ಕಳನ್ನು ಎತ್ತರಕ್ಕೆ ಬೆಳೆಸುತ್ತದೆ : ನಿರ್ಮಲಾನಂದಶ್ರೀ

ತಾಯಿಯ ವಾತ್ಸಲ್ಯ ದೀಕ್ಷೆಯಿಂದ ಪಡೆಯುವ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿಯನ್ನು ಬಹಳ ಎತ್ತರಕ್ಕೆ ಬೆಳೆಸುತ್ತದೆ. ಅಮ್ಮನ ಒಂದು ಕೈ ತುತ್ತು ಮಕ್ಕಳ ಜೀವಮಾನದ ಸಾರ್ಥಕತೆಯನ್ನು ತಂದು ಕೊಡುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ನಾಗಮಂಗಲ ತಾಲೂಕಿನ ಬಿ ಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಮಾತೃ ಭೋಜನ ಎಂಬ ವಿಶಿಷ್ಟ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶ್ರೀಕೃಷ್ಣ ಮತ್ತು ರುಕ್ಮಿಣಿ ದಂಪತಿಗಳು ಪಾಂಡವರನ್ನು ಊಟಕ್ಕೆ ಕರೆಯುವ, ಭೀಮನ ಉದರವನ್ನು ತೃಪ್ತಿಗೊಳಿಸುವ ತಾಯಿಯ ತುತ್ತಿನ ಘಟನೆಯನ್ನು ತಿಳಿಸುತ್ತಾ ಮಾತೃ ಭೋಜನದ ಮಹತ್ವವನ್ನು ಅವರು ವಿವರಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ತಾಯಿಯು ತನ್ನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಚಂದ್ರನನ್ನು ತೋರಿಸಿ ಊಟ ಮಾಡಿಸುತ್ತಿದ್ದ, ಆ ಕಾಲ ಎಷ್ಟು ಅದ್ಭುತವಾಗಿತ್ತು. ಇಂದು ನೂರಾರು ಮಾತೆಯರು ತಮ್ಮ ಮನೆಯಿಂದ ತಂದ ಬುತ್ತಿಯನ್ನು ಇತರ ಮಕ್ಕಳಿಗೂ ಬಡಿಸಿ ತಾಯಿ ಪ್ರೇಮವನ್ನು ಮೆರೆದರು. ಇಂಥಹ ತಾಯಿ-ಮಕ್ಕಳ ಸಂಗಮದ ಅಪೂರ್ವ ಕ್ಷಣವನ್ನು ನಾನು ಕಣ್ತುಂಬಿ ಕೊಂಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ 7 ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರು ತಮ್ಮ ಮನೆಯ ವಿಶೇಷ ಆಹಾರದೊಂದಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಭೋಜನ ಬಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ಎ ಶೇಖರ್, ರಿಜಿಸ್ಟ್ರಾರ್ ಡಾ. ಸಿ ಕೆ ಸುಬ್ಬರಾಯ, ನಿವೃತ್ತ ಐಎಎಸ್ ಅಧಿಕಾರಿ ಚಿಕ್ಕಣ್ಣ, ಕರ್ನಾಟಕ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ, ಟಿಸಿಎಸ್ ನ ಮುಖ್ಯಸ್ಥ ಡಾ.ಚಕ್ರವರ್ತಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು, ಮಾಡೆಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲ ಡಾ. ಬಿ ರಮೇಶ್, ಡಾ.ಪ್ರಶಾಂತ್, ಪ್ರೊ.ಚಂದ್ರಶೇಖರ್. ಡಾ. ಬಿ ಕೆ ನರೇಂದ್ರ, ಡಾ. ಎಂ ಜಿ ಶಿವರಾಮು, ಪ್ರೊ. ಎನ್ ರಾಮು, ಹಣಕಾಸು ಅಧಿಕಾರಿ ಬಿ ಕೆ ಉಮೇಶ್, ಡಾ. ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ