ಮಂಡ್ಯ ತಾಲ್ಲೂಕು ದುದ್ದ ಹೋಬಳಿಯ ಮುದಗಂದೂರು ಗ್ರಾಮದ ನಾಗೇಶ್ ಬಿನ್ ಜವರಯ್ಯ (45) ಎಂಬುವವನನ್ನು ಕೊಲೆ ಮಾಡಿದ ಆರೋಪದ ಮೇಲೆ ನಾಗೇಶ್ ಎಂಬ ವ್ಯಕ್ತಿಯನ್ನು ಕೊಲೆ ನಡೆದ ಕೇವನ 24 ಗಂಟೆಗಳಲ್ಲೇ ಶಿವಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಾದ ಮಂಡ್ಯ ತಾಲ್ಲೂಕಿನ ಹುಚ್ಚೇಗೌಡನ ಕೊಪ್ಪಲು ಗ್ರಾಮದ ನಾಗೇಶ್ ಬಿನ್ ಬೋರಯ್ಯ (43) ಎಂಬಾತನನ್ನು ಮಲೈಮಹದೇಶ್ವರ ಬೆಟ್ಟದಲ್ಲಿ ತಲೆ ಮರೆಸಿಕೊಂಡಿದ್ದನ್ನು, ಈತನನ್ನು ಅಲ್ಲಿಯೇ ದಸ್ತಗಿರಿ ಮಾಡಲಾಗಿದೆ.
ಆರೋಪಿಯ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರಾದ ಸಿ.ವಿ ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಮಂಡ್ಯ ಪೋಲೀಸ್ ಉಪಾಧೀಕ್ಷಕ ಎಲ್.ಕೆ.ರಮೇಶ್ ಮಾರ್ಗದರ್ಶನದಲ್ಲಿ, ಕೆರಗೋಡು ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಎನ್.ವಿ.ಮಹೇಶ್ ನೇತೃತ್ವದಲ್ಲಿ ಶಿವಳ್ಳಿ ಪೊಲೀಸ್ ಠಾಣೆಯ ಪಿ.ಎಸ್‌ಐ. ರಾಘವೇಂದ್ರ ಎಂ.ಕಠಾರಿ ಮತ್ತು ರಘುಪ್ರಕಾಶ್, ಎ.ಎಸ್.ಐ ಅವರಾದ ಬಿ.ಎಚ್.ವೆಂಕಟಯ್ಯ, ಡಿ.ಎಸ್. ವೆಂಕಟೇಶ್, ಸಿ.ಹೆಚ್.ಸಿ ಎನ್.ಆರ್. ಸತೀಶ್, ಮಹದೇವಸ್ವಾಮಿ ಮತ್ತು ಸಿಪಿಸಿ ಮಂಜುನಾಥ್, ಲೋಕೇಶ್ ಮತ್ತು ರವಿಕಿರಣ್ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಆರೋಪಿಯನ್ನ ದಸ್ತಗಿರಿ ಮಾಡಿದೆ.
ಶಿವಳ್ಳಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೋಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿ, ಪ್ರಶಂಸಿದ್ದಾರೆ.




