Friday, September 20, 2024

ಪ್ರಾಯೋಗಿಕ ಆವೃತ್ತಿ

ನಾನೊಬ್ಬ ಮುಸ್ಲಿಂ ಮಹಿಳೆ

ಕೋಮುಕ
ಕೀಚಕ
ಕಲ್ಲಡ್ಕ ಭಟ್ಟನೇ
ಕೇಳು…..

ನಾನೊಬ್ಬ ಮುಸ್ಲಿಂ ಮಹಿಳೆ

ನಾನೊಬ್ಬ ಮುಸ್ಲಿಂ ಮಹಿಳೆ
ನಾನು ಹರಾಜಿಗಿಲ್ಲ…

ನಾನೂ ಪ್ರಾಣತ್ಯಾಗ ಮಾಡಿದ್ದೇನೆ
ಈ ದೇಶದ ಆಜಾದಿಗೆ
ಬ್ರಿಟಿಷರ ವಿರುದ್ಧ ಸೆಣೆಸಿದ್ದೇನೆ..

ನಾನು ಶಹೀನ್ ಭಾಗ್
ನಾನು..
ಕಾಶ್ಮೀರದಲ್ಲಿ ಮಣಿಪುರದಲ್ಲಿ
ನಿಮ್ಮನ್ನು ನಡುಗಿಸುವ ಗುಡುಗು

ದಮನವಿದ್ದಲ್ಲೆಲ್ಲ ನನ್ನ ವಿರೋಧ
ನಾನು..
ಜಮಿಯಾದಲ್ಲಿ, ಅಲಿಘರದಲ್ಲಿ
ನಿಮ್ಮ ಲಾಠಿಯನ್ನು ತಡೆದವಳು

ನೀವು ಅಳಿಸಬಯಸುವ
ಇತಿಹಾಸ ನಾನು..
ನೀವು ಒರೆಸಬಯಸುವ
ಭೂಗೋಳ ನಾನು..

ನೋವುಂಡವರೆಲ್ಲರಿಗೂ ನಾನು ಸಹೋದರಿ..
ಕಣ್ಮರೆಯಾದ ಮಕ್ಕಳೆಲ್ಲರ ತಾಯಿ.

ನೀನು ಹಾಸಿಗೆ ಹಿಡಿದಾಗ
ಆರೈಕೆ ಮಾಡಿದ ಹೆಂಡತಿ..

ನಾನು ಸಲಹುವಳು
ನಾನು ಪ್ರೀತಿಸುವಳು

ನಾನು ನೆಲದಲ್ಲಿದ್ದೇನೆ
ಬೆಂಕಿಯೊಳಗಿದ್ದೇನೆ
ಮುಗಿಲ ಮೇಲಿದ್ದೇನೆ
ಅಧಿಕಾರಕ್ಕೆ ಧಿಕ್ಕಾರ ಹೇಳುವ
ಪ್ರತಿಕೂಗಿನಲ್ಲೂ ನಾನಿದ್ದೇನೆ

ನಾನು ನರ್ಸ್, ನಾನು ಡಾಕ್ಟರ್ ನಾನು ಹೋರಾಟಗಾರ್ತಿ
ನಾನು ಪತ್ರಕರ್ತೆ…

ನಾನು ಹಲವು,
ನಾನು ಎಲ್ಲವೂ…

ಬುರ್ಖಾ ಧರಿಸಿದ್ದೇನೆ
ಕೆಲವೊಮ್ಮೆ
ಬುರ್ಖಾ ಕಳಚಿದ್ದೇನೆ..

ನಾನು ಮಾತುಕಳೆದುಕೊಂಡವರ ಮಾತು

ನಾನು ಅಯೂಬ್, ನಾನು ಖಾನುಮ್
ನಾನು ಸಿದ್ರಾ, ನಾನು ಅಜೀಮ್
ನಾನು ಇಸ್ಮತ್, ನಾನು ರಾಣಾ॒

ನಾನು ಸಿಂಘು ಗಡಿಯನ್ನು
ಬೆಳಗಿದ
ಸಾವಿರ ದೀಪಗಳ ಕಂದೀಲು

ನಾನೊಬ್ಬ ಮುಸ್ಲಿಮ್ ಮಹಿಳೆ
ಬೆಳಕನ್ನು ಕಣ್ಣಲ್ಲಿ ಕಾಪಿಟ್ಟುಕೊಂಡು
ಕಾಯುವ ಮಹಿಳೆ..

ಓ ಹೇಡಿಯೇ,
ಓ ಅರಿವುಗೆಟ್ಟ ಗಾವಿಲನೇ..
ತಿಳಿದುಕೋ ..

ನಾನೊಬ್ಬ ಮುಸ್ಲಿಂ ಮಹಿಳೆ
ಹಾಗೂ
ನಾನು ಹರಾಜಿಗಿಲ್ಲ.

ಮೌಮಿತಾ ಆಲಂ
ಅನು: ಶಿವಸುಂದರ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!