ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಮೈಸೂರು ಜಿಲ್ಲಾ ಸಮಿತಿಯಿಂದ 11ನೇ ರಾಜ್ಯ ಸಮ್ಮೇಳನವು ಮೂರು ದಿನಗಳ ಕಾಲ ನಡೆಯಲಿದೆ.
AITUC ರಾಜ್ಯ ಸಮ್ಮೇಳನವು ಮೈಸೂರು ನಗರದಲ್ಲಿ 3 ದಿನಗಳ ಕಾಲ ನಡೆಯಲಿದ್ದು, (29, 30, 31 ಮೇ 2022) ಸಮ್ಮೇಳನದ ಉದ್ಘಾಟನೆ ಮತ್ತು ಪ್ರತಿನಿಧಿ ಸಮಾವೇಶದಲ್ಲಿ ಭಾಗವಹಿಸಲು AITUC ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾ|| ಅಮರ್ಜೀತ್ ಕೌರ್, ಕಾರ್ಯಾಧ್ಯಕ್ಷರಾದ ಕಾ|| ಹೆಚ್.ಮಹದೇವನ್, ಮುಖ್ಯ ಅತಿಥಿಗಳಾಗಿ ಕಾ. ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ CPI, ಕಾ|| ಸಿದ್ಧನಗೌಡ ಪಾಟೀಲ್, ಹೊಸತು ನಿಯತಕಾಲಿಕೆ ಸಂಪಾದಕರು, ಕಾ|| D.A. ವಿಜಯಭಾಸ್ಕರ್, ರಾಜ್ಯ AITUC ಪ್ರಧಾನ ಕಾರ್ಯದರ್ಶಿಯವರು ಭಾಗವಹಿಸಲಿದ್ದಾರೆ.
ಸಮ್ಮೇಳನದ ಬಹಿರಂಗ ಅಧಿವೇಶನವು ಮದ್ಯಾಹ್ನ 12.30 ಗಂಟೆಗೆ ಪುರಭವನದ ಮೈಧಾನದಲ್ಲಿ ನಡೆಯಲಿದ್ದು ಈ ಸಭೆಯ ಅಧ್ಯಕ್ಷತೆಯನ್ನು AITUC ಯ ರಾಜ್ಯಾಧ್ಯಕ್ಷರಾದ ಕಾ ಹೆಚ್.ವಿ.ಅನಂತಸುಬ್ಬರಾವ್ ರವರು ವಹಿಸಲಿದ್ದಾರೆ.
ಬಹಿರಂಗ ಅಧಿವೇಶನಕ್ಕೆ ಮೊದಲು ಸುಮಾರು 5 ಸಾವಿರ ಕಾರ್ಮಿಕರ ಬೃಹತ್ ಮೆರವಣಿಗೆಯು ಪುರಭವದಿಂದ ಆರಂಭಿಸಲಾಗುವುದು.
ಮೆರವಣಿಗೆಯು ಗಾಂಧಿ ವೃತ್ತದ ಮೂಲಕ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ ಹಾಗು ಅಶೋಕ ರಸ್ತೆಯ ಮೂಲಕ ಸಾಗಿ ಪುರಭವನ ಸೇರುವುದು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)ನ ಪರವಾಗಿ ಛೇರ್ಮನ್ ಹೆಚ್. ಆರ್. ಶೇಷಾದ್ರಿ ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆಯುವ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) 11ನೇ ರಾಜ್ಯ ಸಮ್ಮೇಳನಕ್ಕೆ ಮೈಸೂರು ಪಾಲಿಮರ್‍ಸ್ ಆಡಳಿತ ವರ್ಗ ಮತ್ತು ಕಾರ್ಮಿಕರು ಶುಭಕೋರಿದ್ದಾರೆ.