Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಿ.ಡಿ.ಗಂಗಾಧರ್ ಭರವಸೆ: ಮೈಷುಗರ್ ನಿವೃತ್ತ ನೌಕರರ ಮುಷ್ಕರ ಅಂತ್ಯ

ಮೈಷುಗರ್ ಸಕ್ಕರೆ ಕಂಪನಿಯ ನಿವೃತ್ತ ನೌಕರರ ಹಿತರಕ್ಷಣಾ ಸಮಿತಿ ಮಂಡ್ಯ ವತಿಯಿಂದ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಅಂತ್ಯಗೊಂಡಿದೆ.

ಕಾರ್ಖಾನೆ ಆವರಣದಲ್ಲಿ ನಿವೃತ್ತ ನೌಕರರಿಗೆ ತ್ರಿಪಕ್ಷೀಯ ವೇತನ ಸಮಿತಿ ಶಿಫಾರಸ್ಸಿನ ಅನ್ವಯ ಹಿಂಬಾಕಿ ಹಣ ಹಾಗೂ ಇತರೆ ಸೌಲಭ್ಯಗಳನ್ನು ಪಾವತಿ ಮಾಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಆಡಳಿತ ಮಂಡಳಿ ವಿರುದ್ಧ ನೌಕಕರು ಕಳೆದ ನಾಲ್ಕು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ ಮೈಷುಗರ್ ನೂತನ ಅಧ್ಯಕ್ಷ ಸಿ.ಡಿ.ಗಂಗಾಧರ್ ಹಿಂಬಾಕಿ ಹಣ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಗೊಂಡಿತು.

ಅಧಿಕಾರ ವಹಿಸಿಕೊಂಡ ನಾಲ್ಕು ದಿನಗಳಲ್ಲೇ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ನೌಕರರ ಬೇಡಿಕೆ ಈಡೇರಿಸುವ ಭರವಸೆ‌ ನೀಡಿದ್ದಾರೆ. ಮುಷ್ಕರನಿರತ ನೌಕರರಿಗೆ ಹಣ್ಣು ತಿನ್ನಿಸುವ ಮೂಲಕ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ ಮೇರೆಗೆ ನೌಕರರು ಮುಷ್ಕರವನ್ನು ಕೈ ಬಿಟ್ಟರು.

ಕಾರ್ಮಿಕ ಮುಖಂಡರಾದ ಶಿವಲಿಂಗಯ್ಯ, ನಾಗೇಶ್, ವೆಂಕಟೇಶ್, ಎನ್.ಬಿ.ನಾರಾಯಣ, ಬೊಮ್ಮಯ್ಯ, ಸೂರ್ಯನಾರಾಯಣ, ಪಾಂಡವಪುರ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಕಾಂಗ್ರೆಸ್ ಮುಖಂಡರಾದ ಹಿಟ್ಟನಹಳ್ಳಿಕೊಪ್ಪಲು ನಾಗರಾಜು, ಕೊತ್ತತ್ತಿ ರಾಜು, ಜಿಲ್ಲಾ ಮಾಧ್ಯಮ ಸಂಯೋಜಕ ಎ‌ನ್.ಕೃಷ್ಣೇಗೌಡ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ