Saturday, May 25, 2024

ಪ್ರಾಯೋಗಿಕ ಆವೃತ್ತಿ

ನಾಡಪ್ರಭು ಕೆಂಪೇಗೌಡರ ಯೋಜನೆಗಳು ಇಂದಿಗೂ ಪ್ರಸ್ತುತ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿದ್ದು, ರಾಜ್ಯದಲ್ಲಿ ಅವರನ್ನು ಸ್ಮರಿಸುವುದು ಅಗತ್ಯವೆಂದು ಶಾಸಕ ಸುರೇಶಗೌಡ ತಿಳಿಸಿದರು.

ನಾಗಮಂಗಲ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆ ಹಾಗೂ ಬೆಂಗಳೂರು ನಿರ್ಮಾಣ ಮಾಡಿರುವ ಸಾಧನೆ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬೆಂಗಳೂರು ನಿರ್ಮಾಣ ಮಾಡುವ ಮೂಲಕ ನಮ್ಮ ಸಮಾಜದ ಹೆಮ್ಮೆ ಹೆಚ್ಚಿಸಿದ್ದಾರೆ. ಅವರ ಅಂದಿನ ಶ್ರಮದ ಫಲವಾಗಿ ಎಲ್ಲ ಜನಾಂಗದ ಬದುಕು ಕಟ್ಟಿಕೊಳ್ಳುವ ನಗರ ಬೆಂಗಳೂರು ನಿರ್ಮಾಣ ಮಾಡಿರುವ ಕೆಂಪೇಗೌಡರ ಸಾಧನೆಗಳನ್ನು ಕರ್ನಾಟಕದ ಜನರು ನೆನೆಯುತ್ತಾ ಜೀವನ ಮಾಡುತ್ತಿದ್ದಾರೆ ಎಂದರು‌.

ಕೆಂಪೇಗೌಡ ಜಯಂತಿ ಅಂಗವಾಗಿ ಸೌಮ್ಯ ಕೇಶವಸ್ವಾಮಿ ದೇವಾಲಯದ ಬಳಿ ಯಿಂದ ಮಿನಿವಿಧಾನಸೌಧದ ವರೆಗೂ ಮೆರವಣಿಗೆ ನಡೆಸಲಾಯಿತು.

ಅಣೆಚನ್ನಾಪುರದ ಮಂಜೇಶ್ ತಂಡದವರಿಂದ ನಾಡಗೀತೆ, ಭಾವಗೀತೆಗಳ ಗಾಯನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಂದೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಪುರಸಭೆ ಅಧ್ಯಕ್ಷೆ ಆಶಾ ವಿಜಯಕುಮಾರ್, ಉಪಾಧ್ಯಕ್ಷ ಜಾಫರ್. ಒಕ್ಕಲಿಗರ ಸಂಘದ ರಾಜು,ರಾಜೇಗೌಡ, ಕೃಷ್ಣೇಗೌಡ, ವಸಂತಮಣಿ, ಮಂಜುನಾಥ್, ಜವರೇಗೌಡ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.‌

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!