Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಕೃಷಿ ಸಚಿವರ ಕ್ಷೇತ್ರದಲ್ಲಿ ಕಾಟಾಚಾರದ ರೈತ ಸಂಪರ್ಕ ಸಭೆ : ರೈತರ ಆಕ್ರೋಶ

ಕೃಷಿ ಸಚಿವ ಚೆಲುವರಾಯಸ್ವಾಮಿರವರ ಸ್ವಕ್ಷೇತ್ರ ನಾಗಮಂಗಲ ತಾಲೂಕಿನಲ್ಲಿ ಇಂದು ರೈತ ಸಂಪರ್ಕ ಸಭೆಯನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್ ನಯೀಮ್ ಉನ್ನಿಸ ಅಧ್ಯಕ್ಷತೆಯಲ್ಲಿ ಕರೆಯಲಾಗಿತು. ತಾಲೂಕಿನಲ್ಲಿ40ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿದ್ದರೂ, ಬೆರಣಿಕೆಯಷ್ಟು ಅಧಿಕಾರಿಗಳು ಮಾತ್ರ ರೈತ ಸಂಪರ್ಕ ಸಭೆಗೆ ಹಾಜರಿದ್ದರು. ಇನ್ನುಳಿದ ಇಲಾಖೆ ಅಧಿಕಾರಿಗಳು ತಮ್ಮ ಸಹಾಯಕರನ್ನು ಕಳುಹಿಸಿ ಕೈ ತೊಳೆದುಕೊಂಡಿದ್ದರು.  ರೈತರ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳ ಈ ರೀತಿಯ ವರ್ತನೆಯಿಂದ ಕೆಲ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ರವರ ಸ್ವಕ್ಷೇತ್ರ ನಾಗಮಂಗಲದಲ್ಲಿ ರೈತರ ಕುಂದು ಕೊರತೆಗಳನ್ನು ಆಲಿಸುವ ಮತ್ತು ರೈತರಿಗೋಸ್ಕರ ನಡೆಯುವ ಸಭೆಯ ಮಹತ್ವವನ್ನು ಅರಿಯದೆ ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳು, ತಮ್ಮ ಮೊಬೈಲ್ ನಲ್ಲಿ ನಿರತರಾಗಿದ್ದು ಯಾರೂ ಕೂಡ ಈ ಸಭೆಯ ಮಹತ್ವ ಅರಿಯದೆ ತಾವಾಯಿತು ತಮ್ಮ ಮೊಬೈಲಾಯಿತು ಎಂದು, ಮೊಬೈಲ್ ನಲ್ಲಿ ಮಾತನಾಡುತ್ತ ಕಾಲ ಕಳೆಯಲು ಬಂದಂತೆ ಇದ್ದರು.

ಸ್ವಾಭಿಮಾನಿ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆಂಚೇಗೌಡನ ಕೊಪ್ಪಲು ಹರೀಶ್ ಮಾತನಾಡಿ, ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳು ರೈತರ ಸಭೆಯಲ್ಲಿ ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧವೆಂದರು. ರೈತರ ಸಮಸ್ಯೆಗಳನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಈ ವರ್ತನೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!