Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ : ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ನಾಗಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಚಿಣ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಮಾತನಾಡಿದ ಕಸಾಪ ಅಧ್ಯಕ್ಷ ಬಸವೇಗೌಡ ಖರಡ್ಯ ಮಾತನಾಡಿ, ಸ್ವಾಮಿವಿವೇಕಾನಂದರು ಯುವಕರ ಪ್ರೇರಕ ಶಕ್ತಿಯಾಗಿ, ದೇಶದ ಏಕತೆ, ಸಮಗ್ರತೆಯ ಭವ್ಯ ಪರಂಪರೆಯ ಬಗ್ಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ತಿಳಿಸುವ ಮೂಲಕ ಭರತಖಂಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದರು ಎಂದು ಸ್ಮರಿಸಿದರು.

‘ಏಳಿರಿ ಎಚ್ಚರಗೊಳ್ಳಿರಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ದೀನದಲಿತರಿಗೆ ಸಹಾಯ ಮಾಡಿರಿ. ನಿಮ್ಮ ನಿಮ್ಮ ಆತ್ಮದಲ್ಲಿ ದೇವರನ್ನು ಕಾಣಿರಿ’ ಎಂದು ಸಂದೇಶ ನೀಡಿದರು. ಅವರ ಜೀವನ ಸಾಧನೆ ಮೌಲ್ಯಗಳು ಇಂದು ದೇಶಕ್ಕೆ ಅಗತ್ಯ . ಆ ನಿಟ್ಟಿನಲ್ಲಿ ನಾವೆಲ್ಲರೂ ದೇಶದ ಏಕತೆ, ಸಮಗ್ರತೆ, ಸಂಸ್ಕೃತಿ, ಸಾಮರಸ್ಯದಿಂದ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಮಾಜ ವಿಜ್ಞಾನ ಶಿಕ್ಷಕ ಬಸವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಕಾಶ್, ಶಿವಕುಮಾರ್, ರುದ್ರೇಶ್ ಗಾಯತ್ರಮ್ಮ, ಪನ್ನಗ, ಶ್ರುತಿ, ಪವಿತ್ರ, ಸ್ಮಿತಾ, ಶಿಲ್ಪಾ ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!