Sunday, November 22, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ತಾಲ್ಲೂಕು ಕಚೇರಿಯ ನೆಲಮಾಳಿಗೆ ಶಿಥಿಲ ; ಅಭಿಲೇಖಾಲಯ ಜಲಾವೃತ

ನಾಗಮಂಗಲ ತಹಸೀಲ್ದಾರ್ ಕಚೇರಿಯ ನೆಲ ಮಾಳಿಗೆಯಲ್ಲಿ ರೈತರಿಗೇ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನ ಅಭಿಲೇಖಾಲಯ ಶಾಖೆಯಲ್ಲಿ ಸಂಗ್ರಹಣೆ ಮಾಡಿ ರೈತರಿಗೆ ಒದಗಿಸಲಾಗುತ್ತಿದೆ. ಆದರೇ ಮಳೆಗಾಲದಲ್ಲಿ ವಿಪರೀತವಾಗಿ ಶಾಖೆಯ ಮುಂಭಾಗ ನೀರು ಶೇಖರಣೆಯಾಗುತ್ತಿದೆ. ಇದರಿಂದಾಗಿ ರೆಕಾರ್ಡ್ ರೂಂಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅನಿವಾರ್ಯ ನೀರು ದಾಖಲೆ ಇರುವ ಕೊಠಡಿಗೆ ನುಗ್ಗಿದರೆ ದಾಖಲೆಗಳು ನೀರು ಪಾಲಾಗಿ ಆಳಾಗುವುದು ಖಚಿತ. ಇಷ್ಟೆಲ್ಲ ಆದರೂ ಕೂಡ ತಾಲ್ಲೂ ಆಡಳಿತ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಅಧಿಕಾರಿಗಳ ಅಸಮರ್ಥತೆಯನ್ನು ತೋರಿಸುತ್ತಿದೆ. ಇದು ನಿನ್ನೆ ಇಂದಿನ ಸಮಸ್ಯೆ ಅಲ್ಲ ಹಲವು ವರ್ಷಗಳಿಂದ ಹಲವರು ತಹಸೀಲ್ದಾರ್ ಅಧಿಕಾರಿಗಳು ಅಧಿಕಾರದ ಚುಕ್ಕಾಣಿ ಹಿಡಿದರು, ಈ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ.

ಹಲಗೆಯ ಮೇಲೆ ಪ್ರಾಣದ ಹಂಗು ತೊರೆದು ದಾಖಲೆ ತೆಗೆದುಕೊಳ್ಳಲು ಸಾಗುತ್ತಿರುವ ರೈತರು, ಮಹಿಳೆಯರು ಹಾಗೂ ವೃದ್ಧರು ಹರಸಾಹಸ ಪಡುವಂತಾಗಿದೆ. ದಾಖಲೆ ತೆಗೆದುಕೊಳ್ಳುವ ಪ್ರವೇಶದ್ವಾರದಲ್ಲಿ ನೀರು ತುಂಬಿ ಕೊಚ್ಚೆ ಪ್ರದೇಶ ನಿರ್ಮಾಣವಾಗಿದೆ. ಈ ಅಶುಚಿತ್ವ ಜಾಗದಲ್ಲೇ ಕೆಳಗೆ ಕಲ್ಲುಗಳನ್ನ ಜೋಡಿಸಿ ಅದರ ಮೇಲೆ ಮರದ ಹಲಗೆ ಇಟ್ಟಿದ್ದಾರೆ, ಇದರ ಮೇಲೆ ಸರದಿ ಸಾಲಿನಲ್ಲಿ ಸಾಗಿ ದಾಖಲೆ ಪಡೆಯುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಕಲ್ಲುಗಳು ಜರುಗಿದರೆ ಜನರು ಬಿದ್ದು ಗಾಯ ಮಾಡಿಕೊಳ್ಳುವುದು ಗ್ಯಾರಂಟಿಯಾಗಿದೆ.

ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರ ಅವಧಿಯಲ್ಲಿ ನಿರ್ಮಾಣಗೊಂಡ ತಾಲ್ಲೂಕು ಆಡಳಿತ ಸೌಧ ಇಂದು ಅವ್ಯವಸ್ಥೆಯ ಗೂಡಗಿದೆ.

ಕಟ್ಟಡ ಜಲಾವೃತವಾಗಿರುವುದರಿಂದ ನೆಲಮಾಳಿಗೆಯ ಮೆಲ್ಚಾವಣಿ ಕುಸಿಯುವ ಹಂತದಲ್ಲಿದೆ, ರೈತರ ದಾಖಲೆಗಳಿಗಿಲ್ಲ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ದಾಖಲೆಗಳು ನಶಿಸಿ ಹೋಗುವ ಭೀತಿ ಎದುರಾಗಿದೆ. ಇನ್ನೂ ಮುಂದಾದರೂ ಸಚಿವರು ಹಾಗೂ ತಹಶೀಲ್ದಾರ್ ಅವರು ಇದರ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬಿಜೆಪಿ ಮುಖಂಡ ನರಸಿಂಹಮೂರ್ತಿ ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ