Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಚಿಕ್ಕಮ್ಮ ಪದಗ್ರಹಣ

ನಾಗಮಂಗಲದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ತುಪ್ಪದಮಡುವಿನ ಚಿಕ್ಕಮ್ಮ ಇಂದು ಅಧಿಕಾರ ವಹಿಸಿಕೊಂಡರು.

ಕಾಂಗ್ರೆಸ್ ಬೆಂಬಲಿತರಾಗಿರುವ ಚಿಕ್ಕಮ್ಮ ಇಂದು ನಾಗಮಂಗಲ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ನಂತರ ಮಾತನಾಡಿದ ಅವರು, ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದು ಹಾಗೂ ಪಡಿತರ ವಿತರಣೆ ರಸಗೊಬ್ಬರ ಮಾರಾಟ, ಪೆಟ್ರೋಲ್ ಬಂಕ್ ಹಾಗು ಇತರ ಮಳಿಗೆಗಳನ್ನು ಹೊಂದಿದ್ದು ಇವುಗಳ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು..

ಟಿ.ಮರಿಯಪ್ಪ ಹಾಗೂ ಮಾದಪ್ಪಗೌಡ ಅವರಂತಹ ಶಾಸಕರು ಈ ಸೊಸೈಟಿಯನ್ನು ಪ್ರಾರಂಭಿಸುವುದರ ಮೂಲಕ ನಾಗಮಂಗಲದ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನನ್ನ ಮೇಲಿದೆ ,ಇದನ್ನು ಯಶಸ್ವಿಯಾಗಿ ಮೇಲ್ಮಟ್ಟಕ್ಕೆ ಕೊಂಡಯುತ್ತೇನೆ ಎಂದು ತಿಳಿಸಿದರು..

ಚಿಕ್ಕಮ್ಮ ಅವರನ್ನು ಸಚಿವ ಎನ್ ಚೆಲುವರಾಯಸ್ವಾಮಿ ಅವರ ಅಣ್ಣ ಲಕ್ಷ್ಮಿಕಾಂತ್ ಅವರ ಮಗ ಸುನಿಲ್ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ನಾಗಮಂಗಲ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಸಂತ ಮಣಿ , ಗೀತಾ ದಾಸೇಗೌಡ, ಪುಟ್ಟಮ್ಮ ಮಾಯಣ್ಣ ಗೌಡ, ಸಾರೇಮೇಗಲುಕೊಪ್ಪಲು ರಮೇಶ್, ತುಪ್ಪದಮಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಅಭಿನಂದಿಸಿದರು..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ